ಕೋಡಿಂಬಾಳ ಗ್ರಾಮ:ಓಂತ್ರಡ್ಕ ಶಾಲೆಯ SDMC ನೂತನ ಸಮಿತಿ ರಚನೆ

Kadaba Times News

 ಕಡಬ : .ಜಿ.ಪಂ. ಹಿ ಶಾಲೆ ಓಂತ್ರಡ್ಕ ಇದರ  ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ   ಹಿಂದೆ  ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಕೋಲ್ಪೆ  ಮತ್ತೆ  ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ಹೇಮಾವತಿ ಇವರು ಆಯ್ಕೆಯಾಗಿರುತ್ತಾರೆ.



ಇತ್ತೀಚಿಗೆ ನಡೆದ ಪೋಷಕರ ಸಭೆಯಲ್ಲಿ  ನೂತನ ಸಮಿತಿಯನ್ನು ರಚಿಸಲಾಯಿತು. ಪೋಷಕ ಪ್ರತಿನಿಧಿಗಳಾಗಿ   ಸುಮಿತ್ರ, ಪುಷ್ಪ, ಲಕ್ಷ್ಮಿ, ಶೀನ, ಶೀನಪ್ಪ, ನಾರಾಯಣ, ಈಶ್ವರ ನಾಯ್ಕ, ಸಮಾದ್, ರಜಾಕ್, ಸಬೀನಾ, ಸಾರಮ್ಮ, ದಿನೇಶ, ಗಿರೀಶ್, ಜಲಜಾಕ್ಷಿ, ವಿನಯಕುಮಾರಿ, ಶೀಲಾವತಿ  ಅವರನ್ನು ಆಯ್ಕೆ ಮಾಡಲಾಯಿತು. 


ಮುಖ್ಯ ಶಿಕ್ಷಕರಾದ ನೀಲಯ್ಯ ನಾಯ್ಕ ಇವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಪದವೀಧರ ಪ್ರಾಥಮಿಕ ಶಿಕ್ಷಕರಾದ  ದಿಲೀಪ್ ಕುಮಾರ್ ಎಸ್ ಇವರು  ಎಸ್ ಡಿ ಎಂ ಸಿ ರಚನೆಯ ಬಗ್ಗೆ  ಇರುವ ನಿಯಮಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ಶಿಕ್ಷಕಿ  ಹರಣಾಕ್ಷಿ ಇವರು ವಂದಿಸಿದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top