ಕಡಬ: ಎಡಮಂಗಲ ಮಾಲೆಂಗಿರಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕೂಡಿ ಬಾರದ ಮೂಹೂರ್ತ!

Kadaba Times News

 ಕಡಬ ಟೈಮ್, ಎಡಮಂಗಲ: ಕಡಬ ತಾಲೂಕಿನ ಎಡ ಮಂಗಲ  ಮತ್ತು ಸುಳ್ಯ ತಾಲೂಕಿನ ಅಲೆಕ್ಕಾಡಿ ಸಂಪರ್ಕದ ಜಿಲ್ಲಾ ಮುಖ್ಯ ರಸ್ತೆಯ ಎಡಮಂಗಲ ಸಮೀಪದ ಮಾಲೆಂಗಿರಿ ಎಂಬಲ್ಲಿ  ಸೇತುವೆಯು ಇತ್ತೀಚೆಗೆ ಕುಸಿದು ಬಿದ್ದಿತ್ತು.  ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಸೇತುವೆ ತೆರವು ಮಾಡಿ, ಮೋರಿ ಅಳವಡಿಸಿ ರಸ್ತೆ ಸಂಪರ್ಕ ಕಲ್ಪಿಸಿ ಲಘು ವಾಹನ, ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಮಳೆಗೆ ಮೋರಿಯ ಮಣ್ಣು ಮತ್ತೆ ಕುಸಿದ  ಕಾರಣ ಸಂಪರ್ಕ ನಿರ್ಬಂಧಿಸಲಾಗಿತ್ತು. 



ಇದೀಗ ಲೋಕೋಪಯೋಗಿ ಇಲಾಖೆಯಿಂದ ಹೊಸ ಸೇತುವೆ ನಿರ್ಮಾಣಕ್ಕಾಗಿ 30 ಲಕ್ಷ ಬಿಡುಗಡೆಗೊಂಡಿದ್ದು  ಜ. 5 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.



ವಿಪರ್ಯಾಸವೆಂದರೆ  ಗುದ್ದಲಿ ಪೂಜೆ ನಡೆದು ತಿಂಗಳಾದರೂ,  ಲೋಕೋಪಯೋಗಿ ಇಲಾಖೆಯಿಂದ  ಗುತ್ತಿಗೆದಾರರಿಗೆ  ಕೆಲಸ ಆರಂಭಿಸಲು ಆದೇಶ ಬಂದು ತಿಂಗಳ ಕಳೆಯುತ್ತಾ   ಬಂದರೂ  ಇನ್ನು ಕೆಲಸ ಆರಂಭಿಸಿದ  ಕಾರಣ  ಗ್ರಾಮದ ಜನ ಅಸಮಾಧಾನ  ಹೊರ ಹಾಕಿದ್ದಾರೆ.     ಕಾಮಗಾರಿಯನ್ನು ಮುಂದುವರಿಸಲು ಗುತ್ತಿಗೆದಾರರಿಗೆ ನೀಡಿರುವ ನೋಟಿಸ್ ನಲ್ಲಿ ಐದು ತಿಂಗಳ  ಕಾಲಾವಕಾಶ ಉಲ್ಲೇಖಿಸಿ ಪ್ರತೀ ತಿಂಗಳು ಐದು ಲಕ್ಷ ರೂ ವೆಚ್ಚದ ಕಾಮಗಾರಿ ಪ್ರಗತಿ ಮಾಡಬೇಕೆಂದು ಸೂಚಿಸಲಾಗಿದೆ.  

ಆದೇಶದ ಪ್ರತಿ(KADABA TIMES)


ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ  ಲೋಕೋಪಯೋಗಿ ಇಲಾಖೆ ಸುಳ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಅವರು ಗುತ್ತಿಗೆದಾರರಿಗೆ ಈಗಾಗಲೇ ಮೌಖಿಕವಾಗಿ ಹಲವು ಬಾರಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಮತ್ತೊಮ್ಮೆ ಸೂಚಿಸಲಾಗುವುದು ಎಂದಿದ್ದಾರೆ.



ಸಂಕಷ್ಟದಲ್ಲಿ ಎಡಮಂಗಲದ ಜನತೆ:  ಎಡಮಂಗಲ ಕಡಬ ತಾಲೂಕು ವ್ಯಾಪ್ತಿಯಲ್ಲಿದ್ದು ಎಡಮಂಗಲದ ಜನರು ಅಲೆಕ್ಕಾಡಿ ಹಾಗೂ ಅಲೆಕ್ಕಾಡಿ ಭಾಗದವರು ಎಡಮಂಗಲ ಭಾಗಕ್ಕೆ ಸಂಚರಿಸುವ ಪ್ರಮುಖ ರಸ್ತೆಯಲ್ಲಿ ನಿರ್ಬಂಧ ಮಾಡಲಾಗಿರುವುದರಿಂದ  ಎಡಮಂಗಲದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮಾರ್ಗದಿಂದ ಸಂಚರಿಸುತ್ತಿದ್ದ ಸರಕಾರಿ ಬಸ್‌ ಓಡಾಟ ನಿಲ್ಲಿಸಲಾಗಿದ್ದು, ಒಂದೆರಡು ಬಸ್‌ ಕಾಣಿಯೂರಿನಿಂದ ಎಡಮಂಗಲ ಮೂಲಕ ಸಂಚರಿಸುತ್ತಿದೆ. ಆದರೂ ಹೆಚ್ಚಿನ ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನ ಬಳಕೆ, ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ರಸ್ತೆ ಸೂಚಿಸಿದ್ದರೂ ಸುತ್ತು ಬಳಸಿ ಹಾಗೂ ಅಧಿಕ ವೆಚ್ಚ ಬಳಸಿ ಸಂಚರಿಸಬೇಕಾಗಿದೆ.ಜತೆಗೆ ಕಾಣಿಯೂರು ಅಥವಾ ಪಂಜ ಮೂಲಕ ಸುತ್ತು ಬಳಸಿ ಸಂಚರಿಸಬೇಕಾಗಿದೆ


ಸದ್ಯಕ್ಕೆ ಎಡಮಂಗಲದಿಂದ ಅಲೆಕ್ಕಾಡಿ ಭಾಗಕ್ಕೆ ಹಾಗೂ ಅಲೆಕ್ಕಾಡಿ ಭಾಗದಿಂದ ಎಡಮಂಗಲ ಭಾಗಕ್ಕೆ ದಿನನಿತ್ಯ ಸಂಚರಿಸುತ್ತಿದ್ದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳೀಯ ಶಾಲೆ, ಅಂಗನವಾಡಿ ತೆರಳುವವರು, ಸ್ಥಳೀಯವಾಗಿ ಸಂಚರಿ ಸುವವರಿಗೂ ತೀವ್ರ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ

 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top