ಕಡಬದ ಜೇಸಿ ಸಂಸ್ಥೆಯ ಜನಪರ ಕಾರ್ಯಕ್ರಮ: 435 ನಾಯಿ ಹಾಗೂ ಬೆಕ್ಕುಗಳಿಗೆ ರೇಬಿರ್ ನಿರೋಧಕ ಲಸಿಕೆ

ಕಡಬದ ಜೇಸಿ ಸಂಸ್ಥೆಯ ಜನಪರ ಕಾರ್ಯಕ್ರಮ: 435 ನಾಯಿ ಹಾಗೂ ಬೆಕ್ಕುಗಳಿಗೆ ರೇಬಿರ್ ನಿರೋಧಕ ಲಸಿಕೆ

Kadaba Times News
0

 ಕಡಬ ಟೈಮ್, ಪ್ರಮುಖ ಸುದ್ದಿ : ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಪಶು ಸಂಗೋಪನ ಇಲಾಖೆಯ ಜಂಟಿ ಆಶ್ರಯದಲ್ಲಿ    ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡುವ ಶಿಬಿರವು  ಕಡಬ ಪರಿಸರದ ವಿವಿಧ ಗ್ರಾಮಗಳ ಕೇಂದ್ರಗಳಲ್ಲಿ  ನಡೆದಿದೆ.



ಶ್ರೀಗಣೇಶ್ ಮೆಡಿಕಲ್ಸ್ ಸಹಯೋಗದಲ್ಲಿ ಈ ಶಿಬಿರ ಹಬ್ಬಿಕೊಂಡಿದ್ದು ಕಡಬ ಪಟ್ಟಣ ಪಂಚಾಯಿತಿ  ವ್ಯಾಪ್ತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮ, ಬಂಟ್ರ, ೧೦೨ ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ ಹಾಗೂ  ಬಲ್ಯ ಗ್ರಾಮಗಳ ವಿವಿಧ ಕೇಂದ್ರಗಳಗಲ್ಲಿ  ಸಂಚರಿಸಿದ ಲಸಿಕಾ ತಂಡವು ಒಟ್ಟು 435 ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆ ನೀಡಿದ್ದಾರೆ. 


ಮಾರಣಾಂತಿಕವಾದ ರೇಬಿಸ್ ರೋಗದ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನೂ ಕೂಡ ಜಾಗೃತಿ ಮೂಡಿಲ್ಲರೇಬಿಸ್ ಸೋಂಕು ತಗುಲಿದ ಪ್ರಾಣಿ ಮನುಷ್ಯರಿಗೆ ಕಡಿದರೆ ಪ್ರಾಣಾಪಾಯ ಖಂಡಿತಆದುದರಿಂದ ನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಬೇಕು- ಉದ್ಯಮಿ ಅಜಿತ್ ಶೆಟ್ಟಿ

 

  ಲಸಿಕಾ ತಂಡದಲ್ಲಿ  ಕಡಬ ಪಶು ವೈದ್ಯಾಧಿಕಾರಿ ಡಾ|ಅಜಿತ್ ಎಂ.ಸಿ. ಹಾಗೂ ಸುಬ್ರಹ್ಮಣ್ಯ ಪಶು ವೈದ್ಯಾಧಿಕಾರಿ ಡಾ|ಚೇತನ್ಕುಮಾರ್ ಅವರ ನೇತೃತ್ವದಲ್ಲಿ  ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಹನುಮಂತ ಪಾವಿ, ವೀರೇಶ್, ರವಿತೇಜ ಹಾಗೂ ಸಂಪತ್ಕುಮಾರ್  ಭಾಗವಹಿಸಿದ್ದರು. ಕೇಪು ಶ್ರೀಲಕ್ಷ್ಮೀ  ಜನಾರ್ದನ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಯಂಸೇವಕರಾಗಿ ಸಹಕರಿಸಿದ್ದಾರೆ.


ಇಲಾಖೆಯ ಸಹಕಾರದೊಂದಿಗೆ ಜೇಸಿ ಸಂಸ್ಥೆಯು ರೇಬಿಸ್ ಲಸಿಕೆ ನೀಡುವ ಜನಪರ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ.  ಪ್ರತಿ ವರ್ಷ ಕಾರ್ಯಕ್ರಮವನ್ನು ನಡೆಸಲು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು- ಡಾ|ಅಜಿತ್ ಎಂ.ಸಿ. , ಮುಖ್ಯ ವೈದ್ಯಾಧಿಕಾರಿ, ತಾಲೂಕು ಪಶು ವೈದ್ಯಕೀಯ ಆಸ್ಪತ್ರೆ ಕಡಬ



ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ   ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜೇಸಿ ಘಟಕಾಧ್ಯಕ್ಷೆ ವಿಶ್ರುತಾ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರ್ದೇಶಕ ಜೇಮ್ಸ್ ಕ್ರಿಶಲ್ ಡಿ'ಸೋಜ , ಜೇಸಿ ವಲಯಾಧಿಕಾರಿ ಕಾಶೀನಾಥ್ ಗೋಗಟೆ , ಘಟಕದ ಕಾರ್ಯದರ್ಶಿ ನವ್ಯಾಕೃಷ್ಣ  ಪಾಲ್ಗೊಂಡಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top