ಕರ್ನಾಟಕ|ಹೊಸ ವರ್ಷದ ಹೊಸ್ತಿಲಲ್ಲಿ ರಾಜ್ಯದ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ 153 ಅಧಿಕಾರಿಗಳಿಗೆ ಭಡ್ತಿ ಗ್ಯಾರಂಟಿ

ಕರ್ನಾಟಕ|ಹೊಸ ವರ್ಷದ ಹೊಸ್ತಿಲಲ್ಲಿ ರಾಜ್ಯದ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ 153 ಅಧಿಕಾರಿಗಳಿಗೆ ಭಡ್ತಿ ಗ್ಯಾರಂಟಿ

Kadaba Times News
0

ಕಡಬ ಟೈಮ್ಸ್, ರಾಜ್ಯ ಸುದ್ದಿ:  ಹೊಸ ವರ್ಷದ ಹೊಸ್ತಿಲಲ್ಲಿ ರಾಜ್ಯದ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ ರಾಜ್ಯದ ಐಎಎಸ್‌, ಐಪಿಎಸ್‌ ಮತ್ತು ಎಎಫ್ಎಸ್‌ನ 153 ಅಧಿಕಾರಿಗಳಿಗೆ ಸರಕಾರ ಸೇವಾನುಭವಕ್ಕೆ ಅನುಗುಣವಾಗಿ ವಿವಿಧ ಶ್ರೇಣಿಯ ವೇತನ ಸಹಿತ ಭಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.



ಭಡ್ತಿ ಪಡೆದ ಒಟ್ಟು 153 ಅಧಿಕಾರಿಗಳಲ್ಲಿ 68 ಐಎಎಸ್‌ ಮತ್ತು 62 ಐಪಿಎಸ್‌ ಹಾಗೂ 23 ಐಎಫ್ಎಸ್‌ ಅಧಿಕಾರಿಗಳು ಇದ್ದಾರೆ. ಬಹುತೇಕ ಮಂದಿ ಆಯಾ ಹುದ್ದೆಗಳಲ್ಲೇ ಮುಂದುವರಿಯಲಿದ್ದಾರೆ. ಕೆಲವು ಅಧಿಕಾರಿಗಳಿಗೆ ಅಪೆಕ್ಸ್‌ ಶ್ರೇಣಿ, ಇನ್ನು ಹಲವರಿಗೆ ಎಚ್‌ಎಜಿ ಶ್ರೇಣಿ ಸೇರಿದಂತೆ ಸೇವಾನುಭವಕ್ಕೆ ಅನುಗುಣವಾಗಿ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.


ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ್‌ ಪಾಂಡೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌, ಎಡಿಬಿಯ ಕಾರ್ಯನಿರ್ವಹಣ ನಿರ್ದೇಶಕರ ಹಿರಿಯ ಸಲಹೆಗಾರ ವಿ. ಪೊನ್ನುರಾಜ್‌, ಕೇಂದ್ರ ಸಂಸ್ಕೃತಿ ಸಚಿವಾಲಯದ ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸೇರಿದಂತೆ 68 ಐಎಎಸ್‌ ಅಧಿಕಾರಿಗಳಿಗೆ ಭಡ್ತಿ ಸಿಕ್ಕಿದೆ.


ವರ್ಗಾವಣೆ: ಐಜಿಪಿ ವಿಕಾಸ್‌ ಕುಮಾರ್‌ ವಿಕಾಸ್‌ (ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ), ರಮಣ್‌ ಗುಪ್ತಾ (ಗುಪ್ತಚರ ವಿಭಾಗ, ಬೆಂಗಳೂರು) ವರ್ಗಾವಣೆ ಮಾಡಲಾಗಿದೆ.


ಡಿಐಜಿಯಿಂದ ಐಜಿಪಿಗೆ ಮುಂಭಡ್ತಿ:ಚೇತನ್‌ ಸಿಂಗ್‌ ರಾಥೋಡ್‌ (ಐಜಿಪಿ, ಬೆಳಗಾವಿ ವಲಯ), ಅಮಿತ್‌ ಸಿಂಗ್‌ (ಮಂಗಳೂರು ವಲಯ), ಎನ್‌. ಶಶಿಕುಮಾರ್‌ (ಹು-ಧಾ. ಪೊಲೀಸ್‌ ಆಯುಕ್ತ), ವೈ.ಎಸ್‌. ರವಿಕುಮಾರ್‌ (ಗುಪ್ತಚರ ವಿಭಾಗದ ಭದ್ರತೆ), ಸಿ. ವಂಶಿ ಕೃಷ್ಣ (ಡಿಐಜಿ, ನೇಮಕಾತಿ ವಿಭಾಗ).


ಎಸ್‌ಪಿಯಿಂದ ಡಿಐಜಿ:ಕಾರ್ತಿಕ್‌ ರೆಡ್ಡಿ (ಆಡಳಿತ ವಿಭಾಗ, ಪ್ರಧಾನ ಕಚೇರಿ), ಕುಲದೀಪ್‌ ಕುಮಾರ್‌ ಆರ್‌. ಜೈನ್‌ (ಜಂಟಿ ಪೊಲೀಸ್‌ ಆಯುಕ್ತ, ಆಡಳಿತ ವಿಭಾಗ, ಬೆಂಗಳೂರು), ಕೆ. ಸಂತೋಷ್‌ ಬಾಬು (ಗುಪ್ತಚರವಿಭಾಗ), ಇಶಾ ಪಂತ್‌ (ಗುಪ್ತಚರ ವಿಭಾಗ), ಜಿ. ಸಂಗೀತಾ (ಅರಣ್ಯ ವಿಭಾಗ, ಸಿಐಡಿ), ಸೀಮಾ ಲಾಟ್ಕರ್‌ (ಮೈಸೂರು ಆಯುಕ್ತರು), ರೇಣುಕಾ ಸುಕುಮಾರ್‌(ಡಿಸಿಆರ್‌ಇ, ಬೆಂಗಳೂರು), ಡಾ| ಭೀಮಾಶಂಕರ್‌ ಎಸ್‌. ಗುಳೇದ್‌(ಬೆಳಗಾವಿ ಎಸ್‌ಪಿ), ರಾಹುಲ್‌ ಕುಮಾರ್‌ ಶಹಪುರ್‌ವಾದ್‌ (ಎನ್‌ಐಎ), ಧಮೇಂದ್ರ ಕುಮಾರ್‌ ಮೀನಾ (ಕೇಂದ್ರ ಸೇವೆ),ಡಿ. ದೇವರಾಜು (ಡಿಸಿಪಿ ಪೂರ್ವ), ಡಿ.ಆರ್‌. ಸಿರಿಗೌರಿ (ಡಿಸಿಪಿ ಉತ್ತರಸಂಚಾರ), ಅಬ್ದುಲ್‌ ಅಹ್ಮದ್‌(ಬಿಎಂಟಿಸಿ ಭದ್ರತಾ ವಿಭಾಗ), ಎಸ್‌.ಗಿರೀಶ್‌(ಡಿಸಿಪಿ, ಪಶ್ಚಿಮ ವಿಭಾಗ), ಡಾ| ಸಂಜೀವ್‌ ಎಂ. ಪಾಟೀಲ್‌(ಪ್ರಧಾನ ‌ಚೇರಿ), ಎಚ್‌.ಡಿ. ಆನಂದ್‌ ಕುಮಾರ್‌ (ಡಿಸಿಆರ್‌ಇ), ಕಲಾಕೃಷ್ಣಮೂರ್ತಿ (ಪ್ರಧಾನ ಕಚೇರಿ), ಶ್ರೀನಿವಾಸ ಗೌಡ (ಸಿಸಿಬಿ, ಡಿಸಿಪಿ), ಸೈದುಲ್ಲಾ ಅಡಾವತ್‌(ಉತ್ತರವಿಭಾಗ ಡಿಸಿಪಿ), ಡಾ| ಎಸ್‌.ಕೆ. ಸೌಮ್ಯಲತಾ (ರೈಲ್ವೇ ಎಸ್‌ಪಿ) ಸೇರಿ 58 ಮಂದಿಗೆ ಮುಂಭಡ್ತಿ ನೀಡಲಾಗಿದೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top