ಜೇಸಿಐ ಕಡಬ ಕದಂಬ ಘಟಕದ ಆಯೋಜನೆ:SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ

ಜೇಸಿಐ ಕಡಬ ಕದಂಬ ಘಟಕದ ಆಯೋಜನೆ:SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ

Kadaba Times News
0

 ಕಡಬ:ಪಟ್ಟಣ ಸುದ್ದಿ:   ಜೇಸಿಐ ಕಡಬ ಕದಂಬ ಘಟಕದ ವತಿಯಿಂದ   ಸರಸ್ವತೀ ವಿದ್ಯಾಲಯದ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ  ಪರೀಕ್ಷಾ  ಪೂರ್ವ ಸಿದ್ಧತೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ತರಬೇತಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು(KADABA TIMES)


ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್‌ ಉದ್ಘಾಟಿಸಿ ಮಾತನಾಡಿ, ನಿರಂತರ ಅಭ್ಯಾಸ ಮಾಡುವ ಮೂಲಕ ನಾವು ಯಾವುದೇ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಹುದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭ( KADABA TIMES)


ಜೇಸಿಐ ಬೆಳ್ತಂಗಡಿಯ ವಲಯ ತರಬೇತುದಾರ ಶಂಕರ್‌ರಾವ್ ಶುಭ ಹಾರೈಸಿದರು. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೈಲಶ್ರೀ ರೈ, ಜೇಸಿ ನಿಕಟಪೂರ್ವಾಧ್ಯಕ್ಷ ಜಾಫಿ‌ರ್ ಮಹಮ್ಮದ್, ಕಾರ್ಯಕ್ರಮ ನಿರ್ದೇಶಕ ಶ್ರಿಕೃಷ್ಣ ಎಂ.ಆರ್., ರಾಜೇಶ್ ಎ.ಕೆ. ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಜೇಸಿ ಅಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮಮತಾ ದಿನೇಶ್ ಅತಿಥಿಯನ್ನು ಪರಿಚಯಿಸಿ ದರು. ಕಾರ್ಯದರ್ಶಿ ನವ್ಯಕೃಷ್ಣ ವಂದಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top