ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Kadaba Times News
0

 

ಕುಂಡಡ್ಕ ನಿವಾಸಿ ಪ್ರಸಾದ್(KADABA TIMES)

ಕಡಬ ಟೈಮ್ಸ್ ,ಬೆಳ್ತಂಗಡಿ: ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಸೋಮವಾರ (ಡಿ.02) ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆರಾತ್ರಿ ಮೃತದೇಹ ಹೊರತೆಗೆಯಲಾಗಿದೆ.


ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ಸಂಜೆಸುಮಾರು 5‌‌ರಿಂದ‌ 6 ಗಂಟೆ ಸುಮಾರಿಗೆ ನದಿಗೆ ಇಳಿದಿದ್ದು ಬಳಿಕ ಮುಳುಗಿ ನಾಪತ್ತೆಯಾಗಿದ್ದರು.


ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ‌‌‌ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಸಂಜಯ ನಗರದ ಇಸ್ಮಾಯಿಲ್ಹಾಗೂ ಅಗ್ನಿಶಾಮಕದಳದವರು ರಾತ್ರಿ‌11‌ಸುಮಾರಿಗೆ ಮೃತದೇಹ ಮೇಲೆತ್ತಿದ್ದಾರೆ.


ಆರ್ ಎಸ್. ಎಸ್ ಸಂಘದ ಪ್ರಚಾರಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರುಅಂತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಪಾರ್ಥೀವ ಶರೀರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top