ಕಲ್ಲಡ್ಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ ಕಡಬ ಮೂಲದ ಚಾಲಕ ಪತ್ತೆ

ಕಲ್ಲಡ್ಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ ಕಡಬ ಮೂಲದ ಚಾಲಕ ಪತ್ತೆ

Kadaba Times News
0

 

ಪ್ರಕಾಶ್( ಕಡಬ ಟೈಮ್ಸ್)

ಕಡಬ ಟೈಮ್ಸ್ ,ಬಂಟ್ವಾಳ:  ಕಡಬ ಮೂಲದ ಪ್ರಸ್ತುತ ಕಲ್ಲಡ್ಕದ ಅಮ್ಟೂರಿನಲ್ಲಿ ವಾಸವಿರುವ  ಚಾಲಕ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು  ನಾಪತ್ತೆಯಾಗಿದ್ದು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದರು.


ಕಲ್ಲಡ್ಕಅಮ್ಟೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರಕಾಶ್ (40) ಅವರು ಬಿಸಿರೋಡಿನ ಸೋಮಯಾಜಿ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.  ಕಲ್ಲಡ್ಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಕಂಪೆನಿಯಲ್ಲಿ ಹೇಳಿ ಹೋದವರು ಮನೆಗೆ ಬರದೆ ಕಾಣೆಯಾಗಿದ್ದರು.


ಇದೀಗ ಅವರು ಧರ್ಮಸ್ಥಳದಲ್ಲಿ ಪತ್ತೆಯಾಗಿರುವುದುದಾಗಿ ಮಾಹಿತಿ ಲಭಿಸಿದೆ.  ಕಳೆದ 15 ದಿನಗಳಹಿಂದೆಯಷ್ಟೇ ಕಲ್ಲಡ್ಕದ ಅಮ್ಟೂರು ಎಂಬಲ್ಲಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಅದಕ್ಕೂ ಮೊದಲು ಶಂಭೂರಿನಲ್ಲಿ ವಾಸವಾಗಿದ್ದರು. 


ನಾಪತ್ತೆಯಾದವರ  ಮೊಬೈಲ್ಸ್ವಿಚ್ ಆಪ್ ಆಗಿರುವುದು ಮನೆಯವರಿಗೆ ಭಯಹುಟ್ಟಿಸಿತ್ತು ,ಹೀಗಾಗಿ ಇವರ ಪತ್ನಿ  ಬಂಟ್ವಾಳನಗರ ಪೋಲಿಸ್ ಠಾಣೆಗೆ ಹುಡುಕಿಕೊಡುವಂತೆ ದೂರು ನೀಡಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top