ಕಡಬ: ವಿಕಲಚೇತನ ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರೂ ತಾಲೂಕು ಆಡಳಿತ ನಿರ್ಲಕ್ಷ್ಯ

ಕಡಬ: ವಿಕಲಚೇತನ ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರೂ ತಾಲೂಕು ಆಡಳಿತ ನಿರ್ಲಕ್ಷ್ಯ

Kadaba Times News

 


ಕಡಬ:  ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿ ಅಹ್ಮದ್ ಕುಂಞ ಎಂಬವರ ಪುತ್ರ ಮಹಮ್ಮದ್ ಆಸಿಫ್ ಇವರು ಶಾಶ್ವತ ವಿಕಲಚೇತನರಾಗಿದ್ದು   ಇವರಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಹಿಂದೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು.


ಮನವಿಗೆ ಹಿನ್ನೆಲೆ ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರೂ  ತಾಲೂಕು ಆಡಳಿತ ನಿರ್ಲಕ್ಷ್ಯದಿಂದ   ಆಧಾರ್ ಕಾರ್ಡ್ ಆಗಲೇ ಇಲ್ಲ.


ಹಿನ್ನಲೆಯಲ್ಲಿ ಕಡಬ ತಾಲೂಕು ಕಛೇರಿ ಎದುರಿನಲ್ಲಿ ಪ್ರತಿಭಟನೆ ಮಾಡಲು ಸಿದ್ದತೆ ಮಾಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ವಿಕಲಚೇತನ   ಯುವಕ ಹಾಗೂ ಆತನ ತಾಯಿ ಸಹಿತ ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್  ಗೊಳ್ಯಾಡಿಯವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರಿಗೆ ಕಡಬ ತಾಲೂಕು ಕಛೇರಿಯ ಮೂಲಕ ಮನವಿ ಸಲ್ಲಿಲಿಸಿದ್ದರು.


ವಿಶೇಷ ಚೇತನ ಯುವಕನಿಗೆ ಆಧಾರ್ ಮಾಡಿಸದ ಬಗ್ಗೆ  ವಿಶೇಷ ಕಾಳಜಿ ವ್ಯಕ್ತಪಡಿಸಿ ಶುಕ್ರವಾರ ರಾತ್ರಿ ಕಡಬ ಟೈಮ್ ತಂಡವು   ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ   ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಕೂಡಲೇ ಆಧಾರ್ ಕಾರ್ಡ್ ಮಾಡಿಸಲು ಮೌಖಿಕ ಸೂಚನೆ ನೀಡಿದ್ದರು.ಅಲ್ಲದೆ ಶನಿವಾರವೇ ಆಧಾರ್ ಕಾರ್ಡ್ ಪ್ರಕ್ರಿಯೆ ಮಾಡಿಸುವ ಬಗ್ಗೆ ಕಡಬ ಟೈಮ್ ಗೆ ಭರವಸೆ ನೀಡಿದ್ದರು.


ಈ ಬೆನ್ನಲ್ಲೇ ಕಡಬ ತಹಶೀಲ್ದಾರ್ ನೇತೃತ್ವದ ತಂಡ  ವಿಕಲಚೇತನರ ಮನೆಗೆ ಹೋಗಿ ಆಧಾರ್ ಮಾಡಿಸುವ ಪ್ರಕ್ರಿಯೆಯನ್ನು ಮಾಡಿ ಮುಗಿಸಿದೆ .  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸಿಯವರು ಕೆಲವೇ ದಿನದಲ್ಲಿ ಯುವಕನಿಗೆ ಆಧಾರ ಕಾರ್ಡ್ ಕೈಸೇರಲಿದೆ ಎಂದಿದ್ದಾರೆ.   ಎಸಿಯವರ ತ್ವರಿತ ಸ್ಪಂದನೆಗೆ  ಜನರು ಮೆಚ್ಚುಗೆ್ ವ್ಯಕ್ತಪಡಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top