ಗೌಡ ಸಮುದಾಯದ ಯುವನೊಬ್ಬ ಕೊಲೆಯಾಗಿ ತಿಂಗಳು ಕಳೆದರೂ ಜಾತಿ ಸಂಘಟನೆಯವರು ಭೇಟಿ ನೀಡಿಲ್ಲ

ಗೌಡ ಸಮುದಾಯದ ಯುವನೊಬ್ಬ ಕೊಲೆಯಾಗಿ ತಿಂಗಳು ಕಳೆದರೂ ಜಾತಿ ಸಂಘಟನೆಯವರು ಭೇಟಿ ನೀಡಿಲ್ಲ

Kadaba Times News
0

ಕಡಬ ಟೈಮ್ಸ್ , ಬಿಳಿನೆಲೆ:  ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನಿಂದಲೇ ಭೀಕರವಾಗಿ ಕೊಲೆಯಾಗಿದ್ದ. ಈ ವಿಚಾರ ಭಾರೀ ಸುದ್ದಿಯಾಗಿತ್ತು,  ಅರೋಪಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಠಾಣೆ ಮುಂಭಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರೆ ಇತ್ತ ಗ್ರಾ.ಪಂ ಮುಂಭಾಗವೂ ಪ್ರತಿಭಟಿಸಿ ಅವ್ಯವಸ್ಥೆಯ ವಿರುದ್ದ  ಮೃತ ಯುವಕನ ಕುಟುಂಬಸ್ಥರ ಜೊತೆ ಸೇರಿ ಆಕ್ರೋಶ ಹೊರ ಹಾಕಿದ್ದರು. 

ಮೃತ ಯುವಕನ ಮನೆಯಲ್ಲಿ ಉತ್ತರಾಧಿ ಕ್ರಿಯೆ ವೇಳೆ ಸೇರಿರುವ ಕುಟುಂಬಸ್ಥರು


ಇದೀಗ  ಮೃತ ಯುವಕ ಸಂದೀಪ್ ನ ಉತ್ತರಾಧಿ ಕ್ರಿಯೆ ನಡೆದ ಸಂದರ್ಭದಲ್ಲಿ  ಊರಿನ ಪ್ರಮುಖರೊಬ್ಬರು    ಸೇರಿದ ಕುಟುಂಬಸ್ಥರ ಮುಂದೆ ಘಟನೆಯನ್ನು ವಿವರಿಸಿ   ಜಾತಿ ಸಂಘಟನೆ ಇದ್ದರೂ ಬಡ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿಲ್ಲ ಎಂಬ ನೋವನ್ನು  ಬಹಿರಂಗವಾಗಿ ಹಂಚಿಕೊಂಡ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 


ಅಷ್ಟಕ್ಕೂ ವೀಡಿಯೋ ದಲ್ಲಿರುವ ಸಾರಾಂಶ ಏನು?:  ಗ್ರಾಮ ಪಂಚಾಯತ್ ಎಂದರೆ ಗ್ರಾಮ ದೇವತೆಯ ಸ್ಥಾನ ನೀಡಿದ್ದೇವೆ. ನಾವು ಅಲ್ಲಿ ಮೃತದೇಹ ಇಟ್ಟು ಪ್ರತಿಭಟಿಸಿದರೂ ಸರಿಯಾಗಿ ಸ್ಪಂದಿಸದೆ  ರಾಜಕೀಯ ಮಾಡಿರುವುದಾಗಿ ಹೇಳಿದರು.       ಬಡ ಕುಟುಂಬ ಇಂತಹ ಪರಿಸ್ಥಿತಿಯಲ್ಲಿ ಇರುವಾಗ ಮುಂದಿನ ದಿನಗಳಲ್ಲಿ ನಾವು ಬದುಕುವುದಾದರೂ ಹೇಗೆ?  ನಮ್ಮ ಒಕ್ಕಲಿಗ ಗೌಡ ಸಮುದಾಯಕ್ಕೆ ಬಹಳ ಮಹತ್ವದ ಸ್ಥಾನವಿದೆ,    ಗೌಡ ಸಮುದಾಯದ ಯುವನೊಬ್ಬ ಭೀಕರವಾಗಿ ಕೊಲೆಯಾಗಿ ತಿಂಗಳು ಕಳೆದರೂ ಜಾತಿ ಸಂಘಟನೆಯ ಯಾವೊಬ್ಬರೂ ಭೇಟಿ ನೀಡಿ ಮನೆಯವರಿಗೆ ಸಾಂತ್ವನ  ನೀಡಿಲ್ಲ.   ಕಲೆಕ್ಷನ್ ಗೆ ಬೇಕಾದರೆ ಒಂದೇ ಮನೆಗೆ ನಾಲ್ಕೈದು ಬಾರಿ ಬರುತ್ತಾರೆ, ಬಿಳಿನೆಲೆ ಗ್ರಾಮದ ನೆರೆಕೆರೆಯವರು ಸಂಘಟನೆಯಲ್ಲಿ ಪದಾಧಿಕಾರಿಗಳಾಗಿದ್ದಾರೆ. 


ಯಾರೊಬ್ಬರಿಗೂ ಇದುವರೆಗೂ ವಿಷಯವೇ ಗೊತ್ತಿಲ್ವಾ? ,  ಹತ್ತು ಸಾವಿರ ಕೊಡಿ, ಐವತ್ತು ಸಾವಿರ ಕೊಡಿ ಎಂದು ಕೇಳುವುದಿಲ್ಲ,   ಸಾವು ಎಲ್ಲರ ಮನೆಯಲ್ಲೂ ಬರುತ್ತದೆ ,  ಸಾಮಾನ್ಯ ಕೊಲೆಯಾದ್ರೆ ನಾವು ಮಾತಾಡ್ತ ಇರಲಿಲ್ಲ,  ಆದ್ರೆ ಇಂತಹ ಪರಿಸ್ಥಿತಿಯಲ್ಲಿ  ಗೌಡ ಸಮುದಾಯದ ಬಲಿಷ್ಟ ಸಂಘಟನೆ  ಭೇಟಿ ಕೊಡಬೇಕಿತ್ತು.


ಠಾಣೆಗೆ ಹೋದ ಸಂದರ್ಭದಲ್ಲಿ  ಇಷ್ಟು ದೊಡ್ದ ನಮ್ಮ  ಸಮಾಜ ಇದ್ದರೂ ಮೂರು ಬಾರಿ ದೂರು ನೀಡಿದರೂ ಕಂಪ್ಲೇಟ್ ಸ್ವೀಕರಿಸಲಿಲ್ಲ .   ಬೇರೆ ಸಮುದಾಯದ ವ್ಯಕ್ತಿಯೊಬ್ಬರು  ಕರೆದುಕೊಂಡು ಹೋಗಿ ದೂರು ನೀಡಲು ಮುಂದಾಗಿದ್ದರು. ಈ ಸಂದರ್ಭ  ನಿಮ್ಮ ಮಗ ಕೊಲೆಯಾಗಿದ್ದಾನೆ ಎಂದು ಕಂಪ್ಲೆಟ್ ಕೊಡಿ, ನಾಳೆ ಹೆಣ ಕೊಡ್ತವೆ  ಇದರ ಅರ್ಥ ಏನು ಎಂದು ಹೇಳುತ್ತಿರುವುದು ವೀಡಿಯೋದಲ್ಲಿದೆ. 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top