ಕಡಬ ಪಟ್ಟಣ ಪಂಚಾಯತ್: ಅನಧಿಕೃತ ಪ್ರಚಾರದ ಬ್ಯಾನರ್: ಕರೆಂಟು ಕಂಬದಲ್ಲಿ ಬ್ಯಾನರ್ ಅಳವಡಿಸಲು ಪ.ಪಂ ಅನುಮತಿ ಕೊಡುತ್ತಾ?

ಕಡಬ ಪಟ್ಟಣ ಪಂಚಾಯತ್: ಅನಧಿಕೃತ ಪ್ರಚಾರದ ಬ್ಯಾನರ್: ಕರೆಂಟು ಕಂಬದಲ್ಲಿ ಬ್ಯಾನರ್ ಅಳವಡಿಸಲು ಪ.ಪಂ ಅನುಮತಿ ಕೊಡುತ್ತಾ?

Kadaba Times News
0

ಕಡಬ ಟೈಮ್ ಪಟ್ಟಣ ಸುದ್ದಿ:  ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಅಲ್ಲಲ್ಲಿ ಕರೆಂಟು ಕಂಬಗಳಲ್ಲಿ ಪ್ರಚಾರದ ಬ್ಯಾನರ್ ಗಳು ಕಾಣಿಸತೊಡಗಿದೆ.


ಪೇಟೆಯ ಮುಖ್ಯ ರಸ್ತೆಯಲ್ಲಿ ರಾಜಕೀಯ ಪಕ್ಷದ ಬ್ಯಾನರ್,   ಹಬ್ಬದ ಕುರಿತ ಬ್ಯಾನಗಳು ಕರೆಂಟು ಕಂಬಗಳನ್ನು ಆಕ್ರಮಿಸಿದೆ. 


ಕರೆಂಟು ಕಂಬದಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್ (KADABA TIMES)


ಪ.ಪಂ ಅನುಮತಿ ನೀಡುವಾಗ ಸಾರ್ವಜನಿಕ ಸೊತ್ತುಗಳಲ್ಲಿ ಬ್ಯಾನರ್ ಅಳವಡಿಸದಂತೆ ಸೂಚಿಸಿದರೂ ಎಲ್ಲೆಂದರಲ್ಲಿ  ಫಲಕ ನೇತು ಹಾಕಲಾಗುತ್ತಿದೆ. ಮೆಸ್ಕಾಂ ಇಲಾಖೆ ಕಂಬಗಳಲ್ಲಿ ಜಾಹೀರಾತು ಅಥವಾ ಪ್ರಚಾರದ ಬ್ಯಾನರ್ ಅಳವಡಿಸಲು ಅನುಮತಿ ನೀಡದಿದ್ದರೂ   ಕಂಬಳಲ್ಲಿ  ಸಿಕ್ಕಿಸಲಾಗುತ್ತಿದೆ.


ಈ ಹಿಂದೆಯೂ ರಾಜಕೀಯ ಪಕ್ಷಗಳ ಬ್ಯಾನರ್ ಸಹಿತ ವಿವಿಧ ತರಾವಳಿಯ ಬ್ಯಾನರ್ ಗಳು ಕರೆಂಟು ಕಂಬದಲ್ಲಿ ರಾರಾಜಿಸುತ್ತಿತ್ತು. ಮಾದ್ಯಮ ವರದಿಗಳ ಬಳಿಕ ಅವುಗಳನ್ನು ತೆರವು ಮಾಡಲಾಗಿತ್ತು. 


ಇದೀಗ  ಕರೆಂಟು ಕಂಬದಲ್ಲಿ  ಅನುಮತಿ ಪಡೇಯದೆ  ಬ್ಯಾನರ್ ಅಳವಡಿಸುವವರ ವಿರುದ್ದ ಮೆಸ್ಕಾಂ ಇಲಾಖೆ, ಪ.ಪಂ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top