ಕಡಬ: ತಡ ರಾತ್ರಿ ಬಾಡಿಗೆ ಮನೆಯಲ್ಲಿದ್ದ ಹಿಂದೂ ಯುವಕನಿಗೆ ಹಲ್ಲೆ ಯತ್ನ ಘಟನೆ: ರಾಜಕೀಯ ಮುಖಂಡನ ಜೊತೆಯೇ ಕಟ್ಟಡದ ಓನರ್ ರಾಜಿ ಮಾತುಕತೆ

ಕಡಬ: ತಡ ರಾತ್ರಿ ಬಾಡಿಗೆ ಮನೆಯಲ್ಲಿದ್ದ ಹಿಂದೂ ಯುವಕನಿಗೆ ಹಲ್ಲೆ ಯತ್ನ ಘಟನೆ: ರಾಜಕೀಯ ಮುಖಂಡನ ಜೊತೆಯೇ ಕಟ್ಟಡದ ಓನರ್ ರಾಜಿ ಮಾತುಕತೆ

Kadaba Times News
0

 


ಕಡಬ:  ಕಡಬದ ಪಿಜಕ್ಕಳ ದ್ವಾರ ಸಮೀಪದ ಬೈಲಂಗಡಿ ಎಂಬಲ್ಲಿ ಬಾಡಿಗೆ ಮನೆಗೆ ಡಿ.13 ರಾತ್ರಿ ನುಗ್ಗಿದ ಅಪರಿಚಿತರ ತಂಡ  ಹಲ್ಲೆಗೆ ಯತ್ನಿಸಿದ್ದು ಮನೆಯೊಳಗಡೆ ಮಲಗಿದ್ದ ಯುವಕ ಪ್ರಾಣ ಉಳಿಸಲು  ಹಿಂಬಂದಿಯ ಕಿಟಕಿಯನ್ನು ಸಿನಿಮೀಯ ರೀತಿಯಲ್ಲಿ ಮುರಿದು ಬಳಿಕ ಜಿಗಿದು ನೆರೆಮನೆಗೆ ರಕ್ಷಣೆಗೆ ಓಡಿದ ಘಟನೆ ಶನಿವಾರ ರಾತ್ರಿ  2:30 ಸುಮಾರಿಗೆ ನಡೆದಿತ್ತು.

 

ಘಟನೆಯ ಬಳಿಕ  ಸ್ಥಳಕ್ಕೆ ಕಡಬ ಎಸ್. ಅಭಿನಂದನ್ ನೇತೃತ್ವದ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಸಂದರ್ಭದಲ್ಲಿ  ಬಾಡಿಗೆ ಮನೆಯನ್ನು ಒಡೆದಿರುವುದು ಜೊತೆಗೆ ಸ್ಥಳದಲ್ಲಿ ಕಬ್ಬಿಣದ ಕತ್ತಿ ಪತ್ತೆಯಾಗಿತ್ತು. ಮನೆಯೊಳಗಿದ್ದ  ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಬರುವಂತೆ  ಪೊಲೀಸರು ಸೂಚಿಸಿ ತೆರಳಿದ್ದರು. ಇದಾದ ಬಳಿಕ  ಕಟ್ಟಡ ಮಾಲಕರು ಕೂಡ ಪೊಲೀಸರ ನಡೆಯನ್ನು ಪ್ರಶ್ನಿಸಿ ಹೌಹಾರಿದ್ದರು.ಅಲ್ಲದೆ ತನ್ನ ಮಗನಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರ ಹಾಕಿದ್ದರು.

 

 ನಂತರದ ಬೆಳವಣಿಗೆಯಲ್ಲಿ  ಈ ಗಂಭೀರ ಪ್ರಕರಣದ  ಮಿನಿ ರೌಡಿಗಳು  ಕಾಂಗ್ರೆಸ್ ಮುಖಂಡನ ಬೆಂಬಲಿಗರ ತಂಡವಾಗಿದೆ  ಎಂಬ ವಿಚಾರ ಬಹಿರಂಗಗೊಂಡಿತ್ತು. ಗಂಭೀರ ಪ್ರಕರಣವಾದರೂ ಇದೀಗ ಕಟ್ಟಡ ಮಾಲಿಕರು ರಾಜಕೀಯ ಮುಖಂಡನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ  ಮೂಲಕ  ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯನ್ನು ದೂರು ನೀಡದಂತೆ ತಡೆದಿರುವು ಆರೋಪ ಕೇಳಿ ಬರುತ್ತಿದೆ.  ಪೊಲೀಸರು  ನಿಖಿತ ರೂಪದಲ್ಲಿ ದೂರು ನೀಡಲು ತಿಳಿಸಿದರೂ ದೂರು ನೀಡದಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.

 

ಸದ್ಯ  ಕಟ್ಟಡ ಮಾಲಿಕ ಮತ್ತು ರಾಜಕೀಯ ಮುಖಂಡ ಜೊತೆಯಾಗಿ ಮಾತುಕತೆ ಮಾಡುತ್ತಿದ್ದು  ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯನ್ನು ಅಲ್ಲಿಗೆ ಭಾನುವಾರ ಸಂಜೆ ಬರ ಹೇಳಿದ್ದರು. ಇದೀಗ ದಾಂಧಲೆ ನಡೆಸಿದವರು ಕೊಂಡು ಹೋದ ಮೊಬೈಲನ್ನು ಕಟ್ಟಡ ಮಾಲಕರ ಬಳಿ ತಂದು ನೀಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.ಇದ್ಯಾವ ವಿಚಾರಗಳು ಠಾಣೆ ಮೆಟ್ಟಿಲೇರದ ಹಿನ್ನೆಲೆ ಗ್ರಾಮದ ನಿವಾಸಿಗಳು ಸಹಜವಾಗಿ ಆತಂಕಗೊಂಡಿದ್ದಾರೆ. ಬೇರೆ ಮನೆಗೂ ಇದೇ ರೀತಿ ನುಗ್ಗುತ್ತಿದ್ದರೂ ಭಯಾನಕ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳುತ್ತಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top