ಕಡಬದ ಪಾಲೋಳಿಯಲ್ಲಿ ಬೆಳ್ಳಂಬೆಳಗ್ಗೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಮೇಲೆ ಹಲ್ಲೆ, ಜೀವ ಬೆದರಿಕೆ: ಠಾಣೆಯಲ್ಲಿ FIR ದಾಖಲು

ಕಡಬದ ಪಾಲೋಳಿಯಲ್ಲಿ ಬೆಳ್ಳಂಬೆಳಗ್ಗೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಮೇಲೆ ಹಲ್ಲೆ, ಜೀವ ಬೆದರಿಕೆ: ಠಾಣೆಯಲ್ಲಿ FIR ದಾಖಲು

Kadaba Times News
0



 ಕಡಬ: ರಬ್ಬರ್  ಟ್ಯಾಪಿಂಗ್ ಮಾಡಲು ಹೋದ ಕಾರ್ಮಿಕರ ಮೇಲೆ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ವ್ಯಕ್ತಿಯೋರ್ವನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಸರ್ವೆ ನಂಬ್ರ 106 ರಲ್ಲಿ ಸಾಬು ಚೆರಿಯನ್ ಎಂಬರಿಗೆ ಸೇರಿದನಾಲ್ಕು ಎಕರೆಯಲ್ಲಿ ತೋಟದಲ್ಲಿ ಡಿ. 15 ರಂದು ಮುಂಜಾನೆ  ತೋಟದ ಕೆಲಸಕ್ಕೆ ರಬ್ಬರ್ ಟ್ಯಾಪಿಂಗ್ ಮಾಡಲು ಮೂವರು  ಕೆಲಸದವರು ತೆರಳಿದ್ದರು.


ಈ ಸಂದರ್ಭದಲ್ಲಿ  ರಬ್ಬರ್ ತೋಟಕ್ಕೆ ಅಬ್ರಹಾಂ ಮತ್ತು ಇತರರು ಅಕ್ರಮ ಪ್ರವೇಶ ಮಾಡಿ ರಬ್ಬರ್ ತೋಟದಲ್ಲಿ ಟ್ಯಾಂಪಿಂಗ್ ಮಾಡುತ್ತಿದ್ದ ಶೋಭಿ, ದಿನೇಶ್, ಸಿಬಿ ಎಂಬವರಿಗೆ ನಿಮ್ಮನ್ನು ಇಲ್ಲಿ ಯಾರು ರಬ್ಬರ್ ಟ್ಯಾಪಿಂಗ್ ಮಾಡಲು  ಹೇಳಿದ್ದು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಟ್ಯಾಪಿಂಗ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂದು ಬೆದರಿಕೆ ನೀಡಿ  ಕಾರ್ಮಿಕರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು


ಈ ಬೆಳವಣಿಗೆಯಲ್ಲಿ  ಮೂವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು.  ತೋಟದ ಮಾಲಿಕ ನೀಡಿದ ದೂರಿನಂತೆ  ಕಡಬ ಠಾಣಾ .ಕ್ರ:106/2024.ಕಲಂ: 329(3),115(2),351(3),352,3(5)BNS-2023. ಯಂತೆ ಪ್ರಕರಣ ದಾಖಲಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top