ಕುದ್ಮಾರಿನಲ್ಲಿರುವ ಆರೋಪಿಯ ಮನೆಗೆ ಬಿಳಿನೆಲೆಯ ಎಷ್ಟು ಯುವಕರು ಹೋಗಿದ್ದರು?

ಕುದ್ಮಾರಿನಲ್ಲಿರುವ ಆರೋಪಿಯ ಮನೆಗೆ ಬಿಳಿನೆಲೆಯ ಎಷ್ಟು ಯುವಕರು ಹೋಗಿದ್ದರು?

Kadaba Times News

ಸುಧೀರ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು


ಕಡಬ ಟೈಮ್, ರಾಜಕೀಯ: ಬಿಳಿನೆಲೆಯ ಯುವಕ ನಾಪತ್ತೆಯಾಗಿ ಬಳಿಕ ನೆಟ್ಟಣದ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಆರೋಪಿ ಪರ  ಇರುವ ಬಗ್ಗೆ   ವದಂತಿ ಹಬ್ಬಿಸಲಾಗಿತ್ತು .ಇದರ ಬೆನ್ನಲ್ಲೇ ಠಾಣೆಗೆ ಆಗಮಿಸಿದ ಬಿಜೆಪಿ ಮುಖಂಡರೂ ಕಾಂಗ್ರೆಸ್ ಮುಖಂಡರ  ಕೈವಾಡ ಇರುವ ಬಗ್ಗೆ ಆರೋಪ ವ್ಯಕ್ತಪಡಿಸಿದ್ದರು . ಇದೀಗ ಕಡಬ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ತುರ್ತು ಸುದ್ದಿ ಗೋಷ್ಟಿ ನಡೆಸಿ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.


ಬುಧವಾರ (ಡಿ 4ರಂದು) ಕಡಬ ಪ್ರೆಸ್ ಕ್ಲಬ್ ನಲ್ಲಿ ಮಹತ್ವದ ಸುದ್ದಿ ಗೋಷ್ಟಿ ನಡೆಸಿ ಬಿಜೆಪಿಯವರ ನೀಚ ರಾಜಕೀಯ ಸಲ್ಲದು. ಈ ಕೊಲೆ ಪ್ರಕರಣದಲ್ಲಿ ಯಾರೂ ಭಾಗಿಯಾಗಿದ್ದರೂ ಅವರ ಬಂಧನವಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ನನಗೆ ಮಾಹಿತಿ ಬಂದ ಕೂಡಲೇ ಪೊಲೀಸರಿಗೆ ತಿಳಿಸುವ ಕೆಲಸ ಮಾಡಿದ್ದೇನೆ.  ಅವರ ಬಂಧನ ಆಗಬೇಕು   ಆರೋಪ ಮಾಡುತ್ತಿರುವ ಆರೋಪ ಮಾಡಿದವರು ಮಜ್ಜಾರು ಕ್ಷೇತ್ರಕ್ಕೆ ಬರಲಿ, ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಪ್ರಾರ್ಥಿಸಲಿದ್ದೇನೆ ಎಂದು ಬೆಸರ ವ್ಯಕ್ತಪಡಿಸಿದರು.


ಅರೋಪಿಯು ಬಂಧನ ಆಗುವ ಮುನ್ನ ಎಲ್ಲಿದ್ದ,ಯಾರ ಜೊತೆ ಇದ್ದ , ಯಾರ ಮನೆಯಲ್ಲಿದ್ದ ಎಂಬುದರ ಬಗ್ಗೆ  ತನಿಖೆಯಾಗಬೇಕು.  ಶನಿವಾರ ಸಂಜೆ   ಕುದ್ಮಾರಿನಲ್ಲಿರುವ   ಆತನ ಮನೆಗೆ ಬಿಳಿನೆಲೆಯ ಎಷ್ಟು ಯುವಕರು ಹೋಗಿದ್ದರು ,ಏನು ವಿಚಾರ ಇದರ ಬಗ್ಗೆ ಆರೋಪಿಯನ್ನು ಬಾಯಿ ಬಿಡಿಸುವ ಕೆಲಸವಾಗಾಬೇಕು, ಹೇಳಬಾರದು ಎಂದು ಬೇದರಿಕೆ ಹಾಕಿರುವ ಬಗ್ಗೆ ಸಂಶಯವಿದೆ  ,ಕೊಲೆ ಮಾಡಿರುವ ಬಗ್ಗೆ ಆತನ ಸ್ನೇಹಿತರಿಗೆ ಗೊತ್ತಿತ್ತು, ಅದನ್ನು ಪೊಲೀಸರಿಗೆ ಏಕೆ ತಿಳಿಸಲಿಲ್ಲ. ಪ್ರತಿಭಟನೆ್ ಮಾಡಿದರಲ್ಲೇ ಯುವಕರಿದ್ದಾರೆ ಅವರ ಬಂಧನ ವಾಗಬೇಕು. ತನಿಖೆ ಆಗಲೇ ಬೇಕು ಎಂಬ ಆಗ್ರಹ ಇಲ್ಲದಿದ್ದರೆ ಗ್ರಾಮಸ್ಥರನ್ನು ಸೇರಿಸಿಕೊಮ್ಡು ನಾವೇ ಪ್ರತಿಭಟನೆ ಮಾಡ್ತವೆ.  

 

ಪೊಲೀಸ್ ಠಾಣೆ ಎದುರು ಮಾಡಬೇಕಾದ ಪ್ರತಿಭಟನೆಯನ್ನು ಹೆಣ ತಂದು ಗ್ರಾ.ಪಂ ನಲ್ಲಿ ಪ್ರತಿಭಟನೆ ಮಾಡಿದ್ದಾರೆ.  ಈ ರೀತಿಯ ರಾಜಕೀಯ ಸಲ್ಲದು ಎಂದರು. ಗಾಂಜಾ ಬಗ್ಗೆ  ಬಗ್ಗೆ ಬಿಜೆಪಿಯವರು ಪ್ರಸ್ತಾಪಿಸಿದ್ದಾರೆ ಅದರ ಬಗ್ಗೆ ನಿಜವಾಗಿಯೂ ತನಿಖೆ ಆಗಬೇಕು. 


ಮೃತ ಯುವಕನ ಮನೆಯವರು ನೀಡಿದ ಮನವಿಯಂತೆ ಗ್ರಾ.ಪಂ ನಲ್ಲಿ ವಿಶೇಷ ಸಭೆ ನಡೆಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮನವಿಯನ್ನು ಕಳುಹಿಸಲಾಗಿದೆ ಎಂದರು. ಪೂರ್ಣ ವಿವರ ಈ ವೀಡಿಯೋದಲ್ಲಿದೆ  ನೋಡಿ ...


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top