




ಕಡಬ: ಹೆಸರುವಾಸಿಯಾಗಿರುವ ದೈವಸ್ಥಾನವೊಂದರ ನೇಮೋತ್ಸವದ ಪ್ರಯುಕ್ತ ನಡೆದ ಸಂಪ್ರದಾಯಕ ಕೋಳಿ ಅಂಕದ ಕಲಕ್ಕೆ ಕಡಬ ಠಾಣೆಯ ಪೊಲೀಸ್ ಜೀಪು ಎಂಟ್ರಿ ಕೊಟ್ಟ ಘಟನೆ ಡಿ.18 ರ ಸಂಜೆ ನಡೆದಿದೆ.
ಆಲಂಕಾರು ಸಮೀಪದ ಪ್ರಸಿದ್ದ ದೈವಸ್ಥಾನದ ನೇಮೋತ್ಸವದ ಹಿನ್ನಲೆ ಎರಡು ದಿನ ಸಂಪ್ರದಾಯಿಕ ಕೋಳಿ ಅಂಕ ನಡೆದಿತ್ತು ಎನ್ನಲಾಗಿದೆ. ಆದರೆ ಬುಧವಾರವೂ ಕೋಳಿ ಅಂಕ ಮುಂದುವರಿದ ಹಿನ್ನಲೆ ಪೊಲೀಸರು ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಎಂಟ್ರಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಆಗಮನದಿಂದ ಕಂಗಲಾಗಿರುವ ಅಲ್ಲಿನ ಆಯೋಜಕರು ಪೊಲೀಸರ ಸೂಚನೆಯಂತೆ ಸ್ಥಳದಲ್ಲಿ ಹಾಕಲಾಗಿದ್ದ ಟೆಂಟ್ ಗಳನ್ನು ತೆರವುಗೊಳಿರುವುದಾಗಿ ತಿಳಿದು ಬಂದಿದೆ.