ಕಡಬ :ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಿಗೆ ಅದ್ದೂರಿ ಸ್ವಾಗತ

ಕಡಬ :ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಿಗೆ ಅದ್ದೂರಿ ಸ್ವಾಗತ

Kadaba Times News
0

ಕಡಬ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ (ರಿ)ಇದರ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಯುಷ್ಮಾನ್ ಮತೀನ್ ಕುಮಾರ್  ಅವರನ್ನು ನ.24 ರ ಮುಂಜಾನೆ ಕಡಬದ ಮುಖ್ಯ ಪೇಟೆಯಲ್ಲಿ ಸ್ವಾಗತಿಸಲಾಯಿತು.


ಕಡಬ ಭೀಮ್ ಆರ್ಮಿ ಘಟಕದ ಅದ್ಯಕ್ಷ ರಾಘವ ಕಳಾರ ಮತ್ತು ಪ್ರಧಾನ ಕಾರ್ಯದರ್ಶಿ ತಾರಾನಾಥ ಕಡೀರಡ್ಕ  ಅವರು ಹೂ ಗುಚ್ಚ ನೀಡಿ ಬರ ಮಾಡಿಕೊಂಡರು. 


ಜೈ ಭೀಮ್ ಘೋಷಣೆಯೊಂದಿಗೆ ಮಹಾಗಣಪತಿ ದೇವಸ್ಥಾನದ ರಸ್ತೆ ಮೂಲಕ ಪ.ಪಂ ಸಭಾಂಗಣದ ವೇದಿಕೆಗೆ ಕರೆ ತರಲಾಯಿತು.


ಈ ಸಂದರ್ಭದಲ್ಲಿ  ಸಂಘಟನೆಯ ರಾಜ್ಯ ಉಪಾಧ್ಯಕ್ಷ  ಜಯಕುಮಾರ್ ಹಾದಿಗೆ, ಹಾಸನ ಜಿಲ್ಲಾಧ್ಯಕ್ಷ  ಪ್ರದೀಪ್ ಹೆಚ್.ಎಸ್ ,ದ.ಕ ಜಿಲ್ಲಾಧ್ಯಕ್ಷ  ವಿವೇಕಾನಂದ ಶಿರ್ತಾಡಿ,ಹಾಸನ ಜಿಲ್ಲಾ ಉಪಾಧ್ಯಕ್ಷ  ನವೀನ್ ಸಾಲಗಾಮೆ, ಹಾಸನ ತಾಲೂಕು ಅಧ್ಯಕ್ಷ  ಹೇಮಂತ್ ಡಿ.ಕೆ, ಶಿಕ್ಷಕ  ಶೇಖರ್ ಅತ್ನಿ, ಸುಳ್ಯ ತಾಲೂಕು ಅಧ್ಯಕ್ಷ  ವಸಂತ್ ಕುದ್ದಾಜೆ, ಅಲೂರು ತಾಲೂಕು ಅಧ್ಯಕ್ಷ  ಜಗದೀಶ್ ನಿಡನೂರು ಸೇರಿದಂತೆ ಪ್ರಮುಖರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top