




![]() |
ಕಿಶೋರ್ ಶಿರಾಡಿ ಮಾತನಾಡುತ್ತಿರುವುದು(KADABA TIMES) |
ಕುಕ್ಕೆ ಸುಬ್ರಹ್ಮಣ್ಯ/ಗುಂಡ್ಯ:
ಜನವರಿ 15 ರ ಒಳಗೆ ಜಂಟಿ ಸರ್ವೆ ಮಾಡಬೇಕು
ಇಲ್ಲದಿದ್ದರೆ ರಾಜಕೀಯದವರನ್ನು ಸೇರಿಸದೆ ಬರೇ ರೈತರೇ
ಸೇರಿ ಪ್ರತಿಭಟನೆ ಮಾಡಲಾಗುವುದು, ಐ ಎ ಎಸ್ ದರ್ಜೆಯ ಅಧಿಕಾರಿಗಳು ಮಾತ್ರ ಬಂದು ನಮ್ಮ ಮನವಿ ಸ್ವೀಕರಿಸಬೇಕು
ಇಲ್ಲದಿದ್ದರೆ ರಸ್ತೆ ತಡೆ ಮಾಡಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ
ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ಶಿರಾಡಿ ಗ್ರಾಮದ ಗುಂಡ್ಯದಲ್ಲಿ ಶುಕ್ರವಾರ ನಡೆದ ಕಸ್ತೂರಿ ರಂಗನ್ ವರದಿ ವಿರುದ್ದದ ಬೃಹತ್ ಪ್ರತಿಭಟನಾ ಸಭೆಯ ಸಭೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧಕ್ಷತೆ ವಹಿಸಿ ಮಾತನಾಡಿದರು.ರೈತರೆಂದರೆ ಹೆಬ್ಬೆಟ್ಟಲ್ಲ ನೆನಪಿರಲಿ, ವಿವಿಧ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾವಂತರು ಇದ್ದಾರೆ.
ನಾವು ಪ್ರತಿಭಟನೆಗೆ ಮಾನಸಿಕವಾಗಿ ಸಿದ್ದರಾಗಿಯೇ ಬಂದಿದ್ದೇವೆ, ಯಾವುದೇ ಕೇಸಿಗೆ ನಾವು ಹೆದರುವುದಿಲ್ಲ. ್ಇಲ್ಲಿನ ಬ್ರಷ್ಟ ಅಧಿಕಾರಿಗಳಿಗೆ ಮನವಿ ಕೊಡೋದಿಲ್ಲ, ಅಕ್ರಮ ಸಕ್ರಮಕ್ಕೆ ಹಣ ಪಡೆದ ಬಗ್ಗೆ ವೀಡಿಯೋ ಸಹಿತ ಸಾಕ್ಷಿ ಇದೆ, ಕಂದಾಯ ಇಲಾಖೆಯವರು ಅಕ್ರಮ ಮಾಡಿರುವುದಕ್ಕೆ ದಾಖಲೆ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದರು .ಅಲ್ಲದೆ ಕಂದಾಯ ಮತ್ತು ಅರಣ್ಯ ಇಲಾಖೆಯ ವಿರುದ್ದ ಹೋರಾಟ ಮಾಡಲಾಗುವುದು ಎಂದರು.ಅಲ್ಲದೆ ಅಗತ್ಯ ಬಿದ್ದರೆ ಬೆಂಗಳೂರು ಚಲೋ ಗೆ ಸಿದ್ದರಿದ್ದೇವೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರು ಮುಂದೆ ನಿಂತು ಸಮಸ್ಯೆಗೆ ಬಗೆಹರಿಸಬೇಕೆಂದರು.