




![]() |
ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿ |
ಕುಕ್ಕೆ
ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನನ್ನು
ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಧಾರವಾಡ
ಮೂಲದ ವೀರಣ್ಣ
ಗೌಡ (26ವ) ಕಳ್ಳತನ ಪ್ರಕರಣದಲ್ಲಿ
ಬಂಧಿತನಾದ ಆರೋಪಿ.
ದೇಗುಲದ ಪಾರ್ಕಿಂಗ್
ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಎಸ್.ಐ ಕಾರ್ತಿಕ್.ಕೆ ನೇತೃತ್ವದ ಪೊಲೀಸರ
ತಂಡ ಪತ್ತೆ
ಹಚ್ಚಿದ್ದಾರೆ. ಜಾಗವೊಂದರ ಬಳಿ ಮೂಟೆ
ಕಟ್ಟಿರುವುದು ಕಂಡು
ಬಂದಿದ್ದು . ಸುಮಾರು
15 ಸಾವಿರಕ್ಕೂ ಹೆಚ್ಚು ಮೊತ್ತದ ಬೆಲೆಬಾಳುವ ಗಂಟೆ, ಕಾಲುದೀಪ,
ತಟ್ಟೆ,ತೂಗುದೀಪ , ಸಿಸಿ ಕೆಮರಾ ಸ್ವಿಚ್ ಸೇರಿದಂತೆ ಕಳ್ಳತನ
ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗುಡಿಯ ಅರ್ಚಕರು ನ. 3ರಂದು ರಾತ್ರಿ ಬಾಗಿಲು ಹಾಕಿ ತೆರಳಿದ್ದು, ನ. 4ರಂದು ಬೆಳಗ್ಗೆ ಬಂದು ನೋಡಿದಾಗ ಕಳ್ಳರು ನುಗ್ಗಿ ದೇವಸ್ಥಾನದಲ್ಲಿದ್ದ ಪೂಜೆ ಸಾಮಗ್ರಿಗಳು,ಸಿಸಿ ಕೆಮರಾದ ಸೊತ್ತುಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ್ದರು
ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ಮಾರ್ಗದರ್ಶನದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ನೇತೃತ್ವದ ಕಾಸ್ಟೇಬಲ್ ಗಳಾದ ಮಹೇಶ್ ಎಂ ಕೆ, ಆಕಾಶ್, ನವೀನ್, ಸಂಧ್ಯಾ, ಮಹೇಶ್ ,ಸತೀಶ್ ಪರಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.