ಕಡಬ: ಹಸಿ ಮೀನು ಮಾರುಕಟ್ಟೆ ಬಳಿ ಗಬ್ಬು ನಾರುತ್ತಿದ್ದ ಕೊಳಚೆ ನೀರಿಗೆ ಮುಕ್ತಿ!

ಕಡಬ: ಹಸಿ ಮೀನು ಮಾರುಕಟ್ಟೆ ಬಳಿ ಗಬ್ಬು ನಾರುತ್ತಿದ್ದ ಕೊಳಚೆ ನೀರಿಗೆ ಮುಕ್ತಿ!

Kadaba Times News
0

 ಕಡಬ: ಪಟ್ಟಣ ಪಂಚಾಯತ್ ಅಧೀನದಲ್ಲಿರುವ ಹಸಿಮೀನು ಮಾರುಕಟ್ಟೆ ಬಳಿ ಗಬ್ಬು ನಾರುತ್ತಿದ್ದ ಕೊಳಚೆ ಪ್ರದೇಶವನ್ನು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಶುಚಿಗೊಳಿಸಿದ್ದಾರೆ.



ಮೀನು ಮಾರುಕಟ್ಟೆ ಪ್ರಾಂಗಣದ ಬಳಿ ಕೊಳಚೆ ನೀರು ಸಂಗ್ರಹವಾಗಿದ್ದು ಗಬ್ಬು ವಾಸನೆಯಿಂದ ಜನ ಮೂಗುಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಅ.2 ರಂದು ಕಡಬ ಟೈಮ್ಸ್ ವರದಿ ಪ್ರಕಟಿಸಿತ್ತು.


ಇದೀಗ ಬಿಟ್ಟು ಬಿಟ್ಟು ಮಳೆ ಬರುವ ಹಿನ್ನೆಲೆ ಕೊಳಕು ನೀರಿನಲ್ಲಿ ಸೊಳ್ಳೆಗಳು ಹುಟ್ಟಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.    


 ವಾರ್ಷಿಕ ಹರಾಜಿನಲ್ಲಿ ಲಕ್ಷಗಟ್ಟಲೆ ಆದಾಯ ಸಂಗ್ರಹಿಸುವ ಕಡಬ ಪಟ್ಟಣ ಪಂಚಾಯತ್  ಮಾತ್ರ ಶುಚಿತ್ವದ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top