ಶಿಕ್ಷಕಿ ಜೊತೆ ಸಪ್ತಪದಿ ತುಳಿದ Bhat N Bhat ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ

ಶಿಕ್ಷಕಿ ಜೊತೆ ಸಪ್ತಪದಿ ತುಳಿದ Bhat N Bhat ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ

Kadaba Times News
0

 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃತಿ-ಸುದರ್ಶನ್ ಭಟ್

ಕಡಬ ಟೈಮ್:  ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

ವಿವಿಧ ರೀತಿಯ ಆಹಾರಗಳನ್ನು ತಮ್ಮದೇ ಶೈಲಿಯ ನಿರೂಪಣೆಯೊಂದಿಗೆ ತಯಾರಿಸುತ್ತಾ, ಕನ್ನಡಿಗರ ಮನಗೆದ್ದಿದ್ದ ಭಟ್ ಎನ್ ಭಟ್  ಹೆಸರಿನ ಯೂಟ್ಯೂಬ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ  ಕಡಬ ಮೂಲದ  ಕೃತಿ ಎನ್ನುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


 ವೃತ್ತಿಯಲ್ಲಿ ವಕೀಲರಾಗಿರುವ ಸುದರ್ಶನ್ ಭಟ್  ಪ್ರವೃತ್ತಿಯಲ್ಲಿ ಒಳ್ಳೆಯ ಅಡುಗೆ ಭಟ್ಟರು ಆಗಿದ್ರು. ಇಂದು ಸುದರ್ಶನ್ ಪುತ್ತೂರು ಹವ್ಯಾಕ ಸಭಾ ಭವನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿ ಜೊತೆ ಸಪ್ತಪದಿ ತುಳಿದಿದ್ದಾರೆ.  



ಸುದರ್ಶನ್ ನಿಶ್ಚಿತಾರ್ಥ ಆಗಸ್ಟ್ ತಿಂಗಳಿನಲ್ಲಿ ನಡೆದಿತ್ತು. ಇತ್ತೀಚೆಗೆ ಇವರಿಬ್ಬರ ವಿಭಿನ್ನವಾದ ಪ್ರೀ ವೆಡ್ಡಿಂಗ್ ಫೋಟೊ ಶೂಟ್  ಭಾರಿ ಸದ್ದು ಮಾಡಿತ್ತು. ಜನುಮವೇ ದೊರೆಕಿದೆ ರುಚಿ ಸವಿಯಲು ಹಾಡಿಗೆ ಇಬ್ಬರು ಕುಚ್ಚಿಲಕ್ಕಿ ಗಂಜಿ ಮಾಡಿ, ಬಾಳೆ ಹೂವಿನ ಚಟ್ನಿ ಮಾಡಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಇವರ ಪತ್ನಿ ಶಿಕ್ಷಕಿಯಾಗಿರೋದರಿಂದ ಶಾಲೆಯಲ್ಲಿಯೂ ಒಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಮೂಲಕ ಮದುವೆ ಡೇಟ್ ರಿವೀಲ್ ಮಾಡಿದ್ದರು..


ಇನ್ನು ಸುದರ್ಶನ್ ಭಟ್, ಕಾಸರಗೋಡಿದ ಸೀತಂಗೋಳಿಯವರು.ಸಹೋದರ ಮನೋಹರ್ ಭಟ್ ಜೊತೆ ಸೇರಿ ಕೊರೊನಾ ಸಂದರ್ಭದಲ್ಲಿ 'ಭಟ್ ಎನ್ ಭಟ್' ಚಾನೆಲ್ ಶುರು ಮಾಡಿದ್ದು ಈಗ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟೇ ಅಲ್ಲ ತಮ್ಮ ಕೈರುಚಿಯ ಸಾಂಬಾರ್ ಪುಡಿ, ಮತ್ತಿತರ ಪುಡಿಗಳನ್ನು ಮಾರಾಟ ಮಾಡೋದಕ್ಕೆ 'ಭಟ್ ಎನ್ ಭಟ್'  ಔಟ್ ಲೆಟ್ ಕೂಡ ತೆರೆದಿದ್ದಾರೆ .



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top