ಕಡಬ:ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮನೆಯಲ್ಲಿಯೇ ಆರೈಕೆಯಲ್ಲಿದ್ದ ಮಹಿಳೆ ಅಸ್ವಸ್ಥಗೊಂಡು ಮೃತ್ಯು

Kadaba Times News

 

ಸಾಂದರ್ಭಿಕ ಚಿತ್ರ(kadaba times)

ಕಡಬ: ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮನೆಯಲ್ಲಿಯೇ ಜೌಷಧಿ ಪಡೆದುಕೊಂಡು ಆರೈಕೆಯಲ್ಲಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟಿರುವ ಬಗ್ಗೆ ನೂಜಿಬಾಳ್ತಿಲ ಗ್ರಾಮದಿಂದ ವರದಿಯಾಗಿದೆ.


ಕಡಬದ ನೂಜಿಬಾಳ್ತಿಲ ಗ್ರಾಮದ  ಲವ್ಲಿ ಕೆ,ಸಿ (49 ವರ್ಷ)ಮೃತಪಟ್ಟವರು.


ನಾಲ್ಕು ದಿನಗಳ ಹಿಂದೆ  ಜ್ವರದಿಂದ ಬಳಲುತ್ತಿರುವುದಾಗಿ ತಿಳಿದಿದ್ದು ಅ.4ರಂದು  ಉದನೆಯಲ್ಲಿರುವ  ಖಾಸಗಿ ಲ್ಯಾಬೊರೇಟರಿಯಲ್ಲಿ  ರಕ್ತ ಪರೀಕ್ಷೆ  ಮಾಡಿಸಿದಾಗ ಡೆಂಗ್ಯೂ ಜ್ವರ ಇರುವುದಾಗಿ ದೃಡಪಟ್ಟಿತ್ತು. ನಂತರ ಮನೆಯಲ್ಲಿಯೇ ಔಷದಿ ಪಡೆದುಕೊಂಡು ಮನೆಯವರ ಆರೈಕೆಯಲ್ಲಿದ್ದರು.


 ಅ.6 ರಂದು ವ್ರವಾಗಿ ಅಸ್ವಸ್ಥಗೊಂಡಿದ್ದು ಮನೆಯವರು ಕೂಡಲೇ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ  ದಾರಿ ಮದ್ಯೆಯೇ  ಉಸಿರು ನಿಂತಂತೆ ಕಂಡುಬಂದಿತ್ತು. ಆಸ್ಪತ್ರೆಯಲ್ಲಿ  ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಈ ಬಗ್ಗೆ ಮೃತರ ಅಣ್ಣಅನೆಕಲ್ಲು ತಾಲೂಕಿನ ಸೆಲೆಬ್ರಿಟಿ ಗ್ರಾಂಡ್ಯೊ ನಿವಾಸಿ ತೋಮಸ್ ಕುಟ್ಟಿ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್ನಂಬ್ರ 33/2024 ಕಲಂ:194 (3),(iv)BNSS-2023 ಯಂತೆ ಪ್ರಕರಣ ದಾಖಲಾಗಿದೆ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top