ಬೆಳ್ಳಾರೆ: ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಅಧಿಕಾರಿ ವಿರುದ್ದ FIR ದಾಖಲು

ಬೆಳ್ಳಾರೆ: ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಅಧಿಕಾರಿ ವಿರುದ್ದ FIR ದಾಖಲು

Kadaba Times News
0

 

ಅರಣ್ಯಾಧಿಕಾರಿ ಸಂಜೀವ ಪೂಜಾರಿ(ಚಿತ್ರ ಕೃಪೆ:FACEBOOK)

ಕಡಬ ಟೈಮ್, ಬೆಳ್ಳಾರೆ:   ಹಿಂದೂ ಹುಡುಗಿಯರ ಬಗ್ಗೆ ಅವಹೇಳನಕಾರಿ ಶಬ್ದ ಬಳಕೆ ಮಾಡಿರುವುದಾಗಿ ಆರೋಪಿಸಿ  ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರ ವಿರುದ್ಧ ಹಿಂದೂ ಜಾಗರಣಾ ವೇದಿಕೆಯಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಜವಾಬ್ದಾರಿಯುತ ಸರಕಾರಿ ಹುದ್ದೆಯಲ್ಲಿದ್ದರೂ ಬೇಜವಾಬ್ದಾರಿಯಿಂದ ಸಮಾಜದ ವಿವಿಧ ಪಂಗಡಗಳ, ಜಾತಿಗಳ ಮಧ್ಯೆ ದ್ವೇಷ, ಗಲಭೆ, ದೊಂಬಿ ಉಂಟುಮಾಡುವಂತಹ ಹೇಳಿಕೆ ನೀಡಿರುತ್ತಾರೆ. ಈ ಹಿಂದೆಯೂ ಇವರು ಈ ರೀತಿಯ ಕೃತ್ಯ ಎಸಗಿರುವುದಾಗಿ ಕಂಡುಬರುತ್ತದೆ.ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿ ತಕ್ಷಣದಲ್ಲೇ ಸೇವೆಯಿಂದ ವಜಾಗೊಳಿಸಿ ಸರಕಾರದ ಅಧಿಕಾರಿಗಳ ಮೇಲಿರುವ ಗೌರವ ಸ್ಥಾನವನ್ನುಳಿಸಬೇಕಾಗಿ ಮತ್ತು ತಪ್ಪಿತಸ್ಥರಾದವರಿಗೆ ಕಾನೂನು ಕ್ರಮದಲ್ಲಿ ಶಿಕ್ಷೆಯನ್ನು ನೀಡಬೇಕಾಗಿ ಹಿಂದೂ ಜಾಗರಣಾ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಪೊಲೀಸರು ಆರೋಪಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಕಲಂ 79 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಅಪಘಾತ, ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಮುಸಿಂ ಸಮುದಾಯದವರು ತಕ್ಷಣ ನೆರವಿಗೆ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಜೀವ ಪೂಜಾರಿಯವರು ಪೋಸ್ಟ್ ಒಂದನ್ನು ವಾರದ ಹಿಂದೆ ಹಾಕಿದ್ದರು. ಇದಕ್ಕೆ ಆಕ್ಷೇಪಿಸಿ ವ್ಯಕ್ತಿಯೊಬ್ಬರು ಸಂಜೀವ ಪೂಜಾರಿಯವರಿಗೆ ಕರೆ ಮಾಡಿದ್ದರು. ವೇಳೆ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಫೋನ್ ಸಂಭಾಷಣೆಯದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಡಿಯೋದಲ್ಲ ಬಿಲ್ಲವ ಹೆಣ್ಣು ಮಕ್ಕಳನ್ನು ಭಜನೆಯ ಹೆಸರಿನಲ್ಲಿ ಕರೆದುಕೊಂಡು ನಿಮ್ಮಂತಹ ಹಿಂದೂತ್ವದ ಯುವಕರು ಹಾಳು ಮಾಡುತ್ತಿರುವುದಾಗಿ ಸಂಜೀವ ಪೂಜಾರಿಯವರು ಹೇಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ.


ಹಿಂದೂ ಯುವತಿಯರನ್ನು ಭಜನೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ಹಾಳು ಮಾಡಲಾಗುತ್ತಿದೆ ಎಂದು ವರ್ಷದ ಹಿಂದೆ ಸಂಜೀವ ಪೂಜಾರಿಯವರು ಫೇಸ್ ಬುಕ್ ನಲ್ಲಿ ಹಾಕಿದ ಫೊಸ್ಟ್ ವಿವಾದ ಎಬ್ಬಿಸಿತ್ತು. ಹೇಳಿಕೆಯ ವಿರುದ್ದ ಹಿಂದೂತ್ವವಾದಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೇ ಕಾರಣಕ್ಕೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆದರೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅವರನ್ನು ಆರೋಪ ಮುಕ್ತಗೊಳಿಸಿ ವೇತನ ಮರು ಪಾವತಿಸುವಂತೆ ಆದೇಶಿಸಿತ್ತು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top