ಕಡಬ: ರಾತ್ರಿ ಸುರಿದ ಮಳೆಗೆ ನೆಲಸಮಗೊಂಡ ಮನೆ|ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಕಡಬ: ರಾತ್ರಿ ಸುರಿದ ಮಳೆಗೆ ನೆಲಸಮಗೊಂಡ ಮನೆ|ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

Kadaba Times News
0
ಕಡಬ ಟೈಮ್ಸ್: ಕೆಲ‌ದಿನಗಳ ಹಿಂದೆ ಸುರಿದ ಮಳೆಗೆ ನೂಜಿಬಾಳ್ತಿಲ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ನೆಲಸಮಗೊಂಡ ಕುರಿತು ವರದಯಾಗಿದೆ.

 ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಬಲಾಡಿ ಪಂಜಳದ ಫಕೀರ ಎಂಬವರ ಮನೆ ಹಾನಿಯಾಗಿರುವುದಾಗಿದೆ.

ನಿರಂತರ ಮಳೆಗೆ ಮನೆಯು ಕುಸಿತಗೊಂಡು ಬೀಳುವ ಮುನ್ಸೂಚನೆ ಅರಿತ ಮನೆ ಮಂದಿ ಮುಂಜಾಗ್ರತಾ ವಾಗಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.
ರಾತ್ರಿ ಸುರಿದ ಮಳೆಗೆ ಪೂರ್ಣ ಕುಸಿದು ಬಿದ್ದಿದೆ.ಕುಟುಂಬದ ಯಜಮಾನ ಅನಾರೋಗ್ಯದಿಂದಲೂ ಬಳಲುತ್ತಿದ್ದು ಕುಟುಂಬಸ್ಥರನ್ನು ಅಧಿಕಾರಿಗಳು ಭೇಟಿ‌ಮಾಡಿ ಮಾಹಿತಿ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ ಖಜೂರೆ, ಗ್ರಾಮಕರಣಿಕ ಸಂತೋಷ್, ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಗುರುವ ಎಸ್, ಗ್ರಾ.ಪಂ ಸದಸ್ಯ ವಸಂತ ಕುಬಲಾಡಿ  ಗ್ರಾಮ ಸಹಾಯಕರು  ಭೇಟಿ ನೀಡಿ‌ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top