ಬಿಳಿನೆಲೆ: ಅನಾರೋಗ್ಯದಿಂದ ತನ್ನ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ವ್ಯಕ್ತಿಗೆ ಆರ್ಥಿಕ ನೆರವು ನೀಡಿದ ಗ್ರಾಮಾಭಿವೃಧ್ಧಿ ಯೋಜನೆಯ ಒಕ್ಕೂಟದ ಸದಸ್ಯರು

ಬಿಳಿನೆಲೆ: ಅನಾರೋಗ್ಯದಿಂದ ತನ್ನ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ವ್ಯಕ್ತಿಗೆ ಆರ್ಥಿಕ ನೆರವು ನೀಡಿದ ಗ್ರಾಮಾಭಿವೃಧ್ಧಿ ಯೋಜನೆಯ ಒಕ್ಕೂಟದ ಸದಸ್ಯರು

Kadaba Times News
0

 ಕಡಬ:   ಅನಾರೋಗ್ಯದಿಂದ ಬಳಲುತ್ತಾ ತನ್ನ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡು ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ  ಬಿಳಿನೆಲೆಯ ನಾಗೇಶ್ ಕುಟುಂಬಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಒಕ್ಕೂಟದ ಸದಸ್ಯರು ಆರ್ಥಿಕ ನೆರವು ನೀಡಿದ್ದಾರೆ.


ವೃತ್ತಿಯಲ್ಲಿ ಚಾಲಕನಾಗಿದ್ದ ಕಡಬ ಗ್ರಾಮದ ಪಣೆಮಜಲು ನಿವಾಸಿ ನಾಗೇಶ್ ರವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಿಳಿನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಒಕ್ಕೂಟದ ಸದಸ್ಯರು ಸಹಾಯಾಸ್ತ ನೀಡಿದ ಸಂದರ್ಭ


ಕಳೆದ ಎರಡು ವರ್ಷದ ಹಿಂದೆ ಕಾಲಿಗೆ ಗಾಯವಾಗಿ ಉಲ್ಬಣಗೊಂಡು  ನಡೆದಾಡಲೂ ಸಾಧ್ಶವಾಗದೇ ಇದ್ದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದು ಪತ್ನಿಯ  ಆಸರೆಯಲ್ಲಿ ಜೀವನ ನಡೆಸುತ್ತಿದ್ದಾರೆ ಮಕ್ಕಳು ವಿಧ್ಶಾಬ್ಶಾಸ ಮಾಡುತ್ತಿದ್ದು ಕುಟುಂಬದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು ಜೀವನ ನಿರ್ವಹಣೆಗೂ ತೀರಾ ಸಮಸ್ಯೆಯಾಗಿದೆ.


ಒಕ್ಕೂಟದ  ಸದಸ್ಯರು  ಒಟ್ಟುಗೂಡಿಸಿದ ರೂ10,050 ಮೊತ್ತದ ಧನ ಸಹಾಯವನ್ನು ಕುಟುಂಬದ ಸದಸ್ಯರಿಗೆ  ಹಸ್ತಾಂತರಿಸಲಾಗಿತು.   ಸಂದರ್ಭದಲ್ಲಿ ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು, ಬಿಳಿನೆಲೆ ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಒಕ್ಕೂಟದ ಪದಾಧಿಕಾರಿಗಳು  ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top