




ಕಡಬ: ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್, ಕಡಬ ಝೋನ್, ಎಸ್ವೈಎಸ್, ಎಸ್ ಎಸ್ ಎಫ್, ಕೆಸಿಎಫ್ ಸುನ್ನೀ ಸಂಘ ಕುಟುಂಬದ ಸಹಯೋಗದಲ್ಲಿ ಮೀಲಾದ್ ಸಂದೇಶ ಭಾಷಣ ಹಾಗೂ ಆಂಬ್ಯುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ಕಡಬ ಜಂಕ್ಷನ್ ನಲ್ಲಿ ಸೆ.23ರಂದು ನಡೆಯಿತು.
ಡಾ| ಎಂ ಎಸ್ ಎಂ ಝೈನಿ ಕಾಮಿಲ್ ಸಖಾಫಿ ಮೀಲಾದ್ ಸಂದೇಶ ಭಾಷಣ ಮಾಡಿದರು. ಸೈಯದ್ ಶಾಹುಲ್ ಹಮೀದ್ ತಂಙಳ್ ಮರ್ಧಾಳ ದುವಾ ನೆರವೇರಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಪಿ.ಪಿ.ವರ್ಗೀಸ್, ಮೀರಾ ಸಾಹೇಬ್, ಡಾ.ತ್ರಿಮೂರ್ತಿ, ಸತೀಶ್ ನಾಯ್ಕ್ ಮೇಲಿನಮನೆ, ಫಝಲ್ ಕೋಡಿಂಬಾಳ, ಆದಂ ಕುಂಡೋಳಿ, ಫೈಝಲ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ಝೋನ್ ಅಧ್ಯಕ್ಷ ಉಮ್ಮರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಇ.ಅಬೂಬಕ್ಕರ್ ನೆಲ್ಯಾಡಿ ಸ್ವಾಗತಿಸಿ, ನಿರ್ವಹಣಾ ಸಮಿತಿಯ ಅಧ್ಯಕ್ಷ ಬಶೀರ್ ಚೆನ್ನಾರ್ ವಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ಮಸೀದಿಗಳ ಅಧ್ಯಕ್ಷರುಗಳು, ಖತೀಬರು, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ನಾಯಕರು, ವಿವಿಧ ಸಂಘ ಕುಟುಂಬದ ಪದಾಧಿಕಾರಿಗಳು, ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿಯ ಸಂಚಾಲಕ ಝಿಯಾರ್ ಕೋಡಿಂಬಾಳ, ಚಾಲಕರ ಉಸ್ತುವಾರಿ ಅಬ್ಬಾಸ್ ಮರ್ಧಾಳ, ಚಾಲಕರಾದ ಫಾರೂಕ್, ಬಶೀರ್, ನಿರ್ವಹಣಾ ಸಮಿತಿಯ ಪದಾಧಿಕಾರಿಗಳಾದ ಹಾರಿಸ್ ಕೋಡಿಂಬಾಳ, ಯೂನುಸ್ ಮೂರಾಜೆ, ರಶೀದ್ ಮಲ್ಲಿಗೆ, ರಫೀಕ್ ಮರುವಂತಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.