ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ E -KYC ಗೆ ಆಗಸ್ಟ್ 31 ಡೆಡ್ ಲೈನ್

Kadaba Times News

 ಕಡಬ ಟೈಮ್: ಪಡಿತರ ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ -ಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದ್ದರೂ ಕೆಲವೊಂದು ಪಡಿತರ ಚೀಟಿ ಸದಸ್ಯರು ಇನ್ನೂ -ಕೆವೈಸಿ ಮಾಡದೇ ಇರುವುದು ಕಂಡುಬರುತ್ತಿದೆ.



ಪ್ರಸ್ತುತ ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ -ಕೆವೈಸಿ ಮಾಡಲೂ ಕೂಡಾ ಅವಕಾಶ ಕಲ್ಪಿಸಿರುತ್ತದೆ. ಜೀವಮಾಪನ ನೀಡಿ -ಕೆವೈಸಿ ಮಾಡಿಸಲು ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ -ಕೆವೈಸಿ ಮಾಡುವುದು. ಸರಕಾರವು .31 ರವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ -ಕೆವೈಸಿ ಮಾಡಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡಬಹುದಾಗಿದ್ದು ಅವಕಾಶವನ್ನು ಸದುಪಯೋಗ ಪಡಿಸಿ -ಕೆವೈಸಿಯನ್ನು ಮಾಡುವಂತೆ ತಿಳಿಸಿದೆ.


ಇದು ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು .31 ನಂತರ -ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ -ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ -ಕೆವೈಸಿ ಮಾಡಿಸಿ ಕೊಳ್ಳಬೇಕು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top