ಗ್ರಾಮೀಣ ಜನರ ಆಟಿ ಅಮವಾಸ್ಯೆಯ ವಿಶೇಷ: ತೆರೆಮರೆಗೆ ಸರಿಯುತ್ತಿರುವ ಈ ಅಪರೂಪದ ಸಾಂಪ್ರದಾಯಿಕ ಆಚರಣೆ ಕಡಬ ಪರಿಸರದಲ್ಲಿ ಜೀವಂತ

ಗ್ರಾಮೀಣ ಜನರ ಆಟಿ ಅಮವಾಸ್ಯೆಯ ವಿಶೇಷ: ತೆರೆಮರೆಗೆ ಸರಿಯುತ್ತಿರುವ ಈ ಅಪರೂಪದ ಸಾಂಪ್ರದಾಯಿಕ ಆಚರಣೆ ಕಡಬ ಪರಿಸರದಲ್ಲಿ ಜೀವಂತ

Kadaba Times News

 ಕಡಬ: ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳ ಮೂಲಕ  ತನ್ನದೆ ಆದ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ.   ವೈಜ್ಞಾನಿಕತೆಯಿದೆ  ಎಂದುಕೊಂಡರೂ  ಪ್ರಸ್ತುತ ಕಾಲಘಟ್ಟದಲ್ಲಿ ಹಲವಾರು  ಪರಂಪರಗತ ಆಚರಣೆಗಳು ತೆರೆಮರೆಗೆ ಸರಿಯುತ್ತಿದೆ. ಇದಕ್ಕೆ ಅಪವಾದ ಎಂಬಂತೆ  ಗ್ರಾಮೀಣ ಭಾಗದಲ್ಲಿ  ಆಷಾಡ ಅಮವಾಸ್ಯೆಯಂದು  ಹರಿವ ನೀರಿಗೆ ಬಾಗಿನ ಅರ್ಪಿಸುವ ಆಚರಣೆ  ಇನ್ನೂ ಜೀವಂತವಾಗಿರುವುದು  ಒಂದು ನಿದರ್ಶನವಾಗಿದೆ


ಅರೋಗ್ಯ , ಬೆಳೆ ವೃದ್ದಿಯ ಪ್ರತೀಕವಾಗಿ ಹರಿಯುವ ನೀರಿಗೆ ಧವಸ ಧಾನ್ಯಗಳನ್ನು ಒಳಗೊಂಡ ಬಾಗಿನವನ್ನು ಅರ್ಪಿಸುವುದು ಅಷಾಡ ಅಮವಾಸ್ಯೆಯಂದು ರೈತರು ಪರಂಪರಗತವಾಗಿ ಆಚರಿಸಿಕೊಂಡು ಬಂದಿದ್ದಾರೆ. ಬದಲಾದ ಕಾಲಘಟ್ಟದಲ್ಲಿ  ಕೆಲವೆಡೆ ಈ ಪದ್ದತಿ ನಶಿಸುತ್ತಿದ್ದರೂ ಕೆಲವೊಂದು ಭಾಗದಲ್ಲಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ.



ಅಂತೆಯೇ  ಭಾನುವಾರ ಕೂಡ ಕಡಬ ತಾಲೂಕಿನಾದ್ಯಂದ ಹಲವು ರೈತಾಪಿ ವರ್ಗ ಸೇರಿದಂತೆ ಜನರು    ಪಕ್ಕದಲ್ಲಿ ಹರಿಯುವ ತೊರೆಗೆ ಅಥವಾ ನದಿ ನೀರಿಗೆ ಬಾಳೆ ಎಳೆಯಲ್ಲಿ  ದವಸ ಧಾನ್ಯ, ಹೂ, ಎಲೆ ಅಡಿಕೆ ಮೊದಲಾದುವಗಳನ್ನು  ಒಳಗೊಂಡ  ಬಾಗಿನ ಅರ್ಪಿಸುವ ಕಾರ್ಯವನ್ನು  ಶ್ರದ್ದಾ ಭಕ್ತಿಯಿಂದ  ಮಾಡಿ ಪುನಿತರಾದರು.

 

ತುಳುನಾಡಿನ ಆಚರಣೆಗಳಿಗೆ  ವೈಜ್ಞಾನಿಕ ಸತ್ಯವಿದೆ. ನಂಬಿಕೆಯ ಅಧಾರದಲ್ಲಿ ನಮ್ಮ ಪೂರ್ವಜರು ಜೀವನ ನಡೆಸುತ್ತಿದ್ದರು. ಅರೋಗ್ಯ, ಬೆಳೆ ಭಾಗ್ಯಕ್ಕಾಗಿ ಕೃಷಿ ತೋಟಗಳ ಪಕ್ಕದಲ್ಲಿ ಹರಿಯುವ ತೊರೆಗಳಲ್ಲಿ ಅಥವಾ ನದಿಗಳಿಗೆ ತೆರಳಿ ಅಷಾಡ ಅಮಾವಸ್ಯೆಯಂದು ಶ್ರದ್ದಾ ಭಕ್ತಿಯಿಂದ ದವಸ ಧಾನ್ಯಗಳನ್ನು ಬಾಳೆ ಎಲೆಯಲ್ಲಿಟ್ಟು ಭಾಗಿನ ಅರ್ಪಿಸುವ ಕಾರ್ಯ ನಡೆಸುತ್ತಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಮುಂದುವರಿಯುತ್ತಿರುವುದು   ಹೊಸ ಬೆಳವಣಿಗೆ. ಯುವ ಪೀಳಿಗೆ ಇಂತಹ ಸಂಪ್ರಾದಾಯಿಕ ಆಚರಣೆಗೆಗಳ ಬಗ್ಗೆ   ಪರಿಚಯವಾಗಬೇಕಿದೆ. ಮುಂದಿನ ಪರಂಪರೆಗೆ ಪಸರಿಸಬೇಕಾಗಿದೆ .

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top