




ಕಡಬ: ಇಲ್ಲಿನ ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಾಮಗಾರಿ ವೇಳೆ ಶಾಲಾ ಕಟ್ಟಡ ಕುಸಿತಗೊಂಡು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಆ.27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ.
![]() |
ಶಾಲಾ ಕಟ್ಟಡ ಕುಸಿತಗೊಂಡ ವೇಳೆ ಸೇರಿದ ಸ್ಥಳೀಯರು |
ಶಾಲಾ ಕಟ್ಟಡದ ಪಕ್ಕದಲ್ಲೇ ಹಳೆಯ ಕಟ್ಟಡದ ಬಳಿ ಜೆಸಿಬಿ ಮೂಲಕ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ.
ಇದರಿಂದಾಗಿ
ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಕ್ಕಳು ಆಟದ ಮೈದಾನಕ್ಕೆ ತೆರಳಿರುವುದರಿಂದ ಭಾರೀ ದುರಂತ ತಪ್ಪಿದೆ . ಅಧಿಕಾರಿಗಳ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ