




ಕಡಬ: ನೂಜಿಬಾಳ್ತಿಲ ಗ್ರಾ.ಪಂ. ನ ಕಲ್ಲುಗುಡ್ಡೆ ಮೀನು ಮಾರಾಟದ ಸ್ಟಾಲ್ ಗೆ ಆ.3 ರ ರಾತ್ರಿ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಟಾಲ್ ಕಂಬಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ವಾಹನ ಗುದ್ದಿದರಿಂದ ಮೀನು ಮಾರಾಟದ ಸ್ಟಾಲ್ ಹಾಕಲಾಗಿದ್ದ ಸಿಮೆಂಟ್ ಶೀಟು ಮತ್ತು ಸಿಮೆಂಟ್ ಕಂಬ ತುಂಡಾಗಿ ಹೋಗಿದೆ.
ಈ ಬಗ್ಗೆ ಮೀನು ಮಾರಾಟ ಸ್ಟಾಲ್
ಸತೀಶ್ ರೈ ಯವರು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮೌಖಿಕ ದೂರು ನೀಡಿದ್ದರೂ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದೆ
ಎಂದು ಆರೋಪಿಸಿದ್ದಾರೆ
ಅಲ್ಲದೆ ಒಂದು ವೇಳೆ ಕಂಬ ಮುರಿದು ಬಿದ್ದು ಏನಾದರೂ ಅಪಾಯ ಸಂಭವಿಸಿದರೆ ಇದಕ್ಕೆ ಪಂಚಾಯತ್ ಹೊಣೆಯಾಗುತ್ತದೆ, ಕೂಡಲೇ ಸರಿಪಡಿಸುವಂತೆ ಸತೀಶ್ ರೈ ಯವರು ಆಗ್ರಹಿಸಿದ್ದಾರೆ.