Latest Update: ಕಡಬ: ಕೈ ತುಂಡರಿಸಿಕೊಳ್ಳಲು ಯತ್ನಿಸಿ ಕುಮಾರಧಾರ ನದಿಗೆ ಹಾರಿದ ವ್ಯಕ್ತಿಯ ಆತ್ಮಹತ್ಯೆ ಯತ್ನಕ್ಕೆ ಕಾರಣ ಸಿಕ್ತು

Latest Update: ಕಡಬ: ಕೈ ತುಂಡರಿಸಿಕೊಳ್ಳಲು ಯತ್ನಿಸಿ ಕುಮಾರಧಾರ ನದಿಗೆ ಹಾರಿದ ವ್ಯಕ್ತಿಯ ಆತ್ಮಹತ್ಯೆ ಯತ್ನಕ್ಕೆ ಕಾರಣ ಸಿಕ್ತು

Kadaba Times News

ಕಡಬ:  ಇಲ್ಲಿನ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು  ಎಂಬಲ್ಲಿ ಕುಮಾರಧಾರ ನದಿಗೆ ಹಾರಿ ಪೊದೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು   ಆಗ್ನಿ ಶಾಮಕ ದಳ ಮತ್ತು ಪೊಲೀಸರು ಜಂಟಿ  ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ ಘಟನೆ ಜುಲೈ 8 ರಂದು  ನಡೆದಿತ್ತು.



ವ್ಯಕ್ತಿಯ ಮಾಹಿತಿ ಲಭ್ಯವಾಗಿದ್ದು ಮೂಲತ:ಆಂದ್ರ ಪ್ರದೇಶದ ಮಡಕಸಿರ ನಿವಾಸಿ ರವಿ ಕುಮಾರ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ   ಬೆಂಗಳೂರು ಮಾರ್ತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.



ನದಿಗೆ ಹಾರಲು ಕಾರಣವೇನು?:  ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ನಷ್ಟ ಉಂಟಾಗಿತ್ತು.ಹೀಗಾಗಿ ಸುಮಾರು ಎರಡುಲಕ್ಷದಷ್ಟು ಸಾಲ ಮಾಡಿದ್ದು ಹೀಗಾಗಿ ನೊಂದು ಕೈ ತುಂಡರಿಸಲು ಯತ್ನಿಸಿ ಬಳಿಕ ನದಿಗೆ ಹಾರಿರುವುದಾಗಿ  ಪೊಲೀಸರ ವಿಚಾರಣೆ ವೇಳೆ  ಆತ ತಿಳಿಸಿದ್ದಾನೆ.

ಈತ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದ, ಸೋಮವಾರ ಮುಂಜಾನೆ 5 ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ  ತನ್ನ ಕೈಯನ್ನು ಯಾವುದೋ ಆಯುಧನಿಂದ ತುಂಡರಿಸಿಕೊಂಡು ನದಿಗೆ ಹಾರಿದ್ದಾನೆ  ಎಂಬ ವಿಚಾರ ಪೊಲೀಸರಿಗೆ ತಿಳಿಸಿದ್ದಾನೆ.

ತುಂಬಿ ಹರಿಯುತ್ತಿದ್ದ ಕುಮಾರಧಾರ ನದಿಗೆ ಹಾರಿದ ಬಳಿಕ ಅದೃಷ್ಟವಶತ್ ಪೊದೆಯೊಂದು ಸಿಕ್ಕಿದ ಕಾರಣ ಅದರಲ್ಲಿ ಸಿಲುಕಿಕೊಂಡಿದ್ದ. ಬಳಿಕ  ರಕ್ಷಣೆಗಾಗಿ ಕೂಗಾಡಿದ್ದು  ಹೀಗಾಗಿ ಸ್ಥಳೀಯರು ಇಲಾಖೆಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ , ಪೊಲೀಸರು,ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ಮಾಡಿದ್ದಾರೆ.

 ಈತನಲ್ಲಿದ್ದ ಮೊಬೈಲ್ ಪೋನ್ ತುಂಬಿ ಹರಿಯುವ ನದಿಯಲ್ಲಿ ನಾಪತ್ತೆಯಾಗಿದೆ.ಈತನ ಪ್ಯಾಂಟ್ ಕಿಸೆಯಲ್ಲಿ ಹತ್ತು ಸಾವಿರ ರೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೈಗೆ ಗಂಭೀರ ಸ್ವರೂಪದ ಗಾಯವಾದ ಕಾರಣ  ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ  ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.



Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top