ಕಡಬ: ಕೋಡಂದೂರು -ವಿಷ್ಣುಡ್ಕ-ಆರ್ತಿಳ -ಅತ್ಯಡ್ಕ ಮಣ್ಣಿನ ರಸ್ತೆ ಕೆಸರುಮಯ

ಕಡಬ: ಕೋಡಂದೂರು -ವಿಷ್ಣುಡ್ಕ-ಆರ್ತಿಳ -ಅತ್ಯಡ್ಕ ಮಣ್ಣಿನ ರಸ್ತೆ ಕೆಸರುಮಯ

Kadaba Times News

 ಕಡಬ/ಮರ್ದಾಳ: ಇತ್ತೀಚೆಗೆ ಆನೆಗೆ ದಾಳಿ ಸಮಸ್ಯೆಗೆ ಒಳಗಾದ ಪ್ರದೇಶವಾಗಿರುವ ಐತ್ತೂರು ಗ್ರಾಮದ ಕೊಡಂದೂರು ಅತ್ಯಡ್ಕ ಮಣ್ಣಿನ ರಸ್ತೆಯು ತೀರಾ ಹದೆಕೆಟ್ಟು ನಡೆಕೊಂಡು ಹೋಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಎಡೆಬಿಡದೆ ಸುರಿದ ಮಳೆಗೆ  ಕಳೆದ 15ದಿನಗಳಿಂದ ಈ ಭಾಗದ  ಜನರಿಗೆ ತೀವ್ರ ಸಂಕಷ್ಟವಾಗಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ  ವಿಧ್ಯಾರ್ಥಿಗಳು ಪರದಾಡುವಂತಾಗಿದೆ.   ಈ ಭಾಗದಲ್ಲಿ  ಆನೆ ಹಾವಳಿಯು ಇದ್ದು ಜನರು ಅಗತ್ಯ ಸಾಮಾನು , ವೈದ್ಯಕೀಯ ಸವಲತ್ತುಗಳನ್ನು ಪಡೆಯಲುಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. 


ರಸ್ತೆಯು 75 ಕ್ಕೂ  ಅಧಿಕ ಮನೆಗಳಿಗೆ ಮರ್ದಾಳ ಮತ್ತು ತಾಲೂಕು ಕೇಂದ್ರ ಕಡಬ ಸಂಪರ್ಕಕ್ಕೆ ಇರುವ ಏಕೈಕ ರಸ್ತೆಯಾಗಿದ್ದು , ಶಾಲಾ ಮಕ್ಕಳು , ಊರಿನ ನಾಗರಿಕರು ಇದೆ ರಸ್ತೆಯನ್ನು ಅವಲಿಂಬಿಸಿರುತ್ತಾರೆ , ಮಳೆಗಾದಲ್ಲಿ ಮಣ್ಣಿನ ರಸ್ತೆಯು ತನ್ನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತದೆ ,ಇದನ್ನೇ ಅವಲಂಬಿಸಿರುವ ನಾಗರಿಕರು ಇದರಿಂದ ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ.




ಸದ್ಯ ಈ ರಸ್ತೆಯಲ್ಲಿ ಅಗತ್ಯ ಇರುವ ಕಡೆ ಕ್ರಷರ್ ಅಥವಾ ದೊಡ್ಡ ಗಾತ್ರದ ಕಲ್ಲು ಮಿಶ್ರಿತ ಮರಳು ಹಾಕಿದಲ್ಲಿ ಜನರ ಓಡಾಟಕ್ಕೆ ಅನುಕೂಲವಾಗಲಿದೆ ಎಂಬುದು ಆ ಭಾಗದ ನಾಗರಿಕರ ಬೇಡಿಕೆಯಾಗಿದೆ.  ಈ ರಸ್ತೆ ಯಲ್ಲಿ ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ,  ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆ ಗಮನಿಸಿ ಈ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಿಕೊಡುವಂತೆ ಅಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.



ಸುಳ್ಯ ಶಾಸಕಿಗೆ ಈ ಹಿಂದೆಯೇ ಮನವಿ: ಮಾಜಿ ಗ್ರಾ.ಪಂ ಸದಸ್ಯರಾದ  ನಾರಾಯಣ ಶೆಟ್ಟಿ ಅತ್ಯಡ್ಕ ಅವರು ಈ ಬಗ್ಗೆ 2023ರ ಮೇ ತಿಂಗಳಲ್ಲಿ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅವರಿಗೆ ರಸ್ತೆ ಅಭಿವೃದ್ದಿ ಪಡಿಸುವಂತೆ ಮನವಿ ಮಾಡಿದ್ದರು. ಡಾಮರೀಕರಣ ಅಥವಾ ಕಾಂಕ್ರೀಟ್ ಆಗದೆ ಮಳೆಗಾಲದಲ್ಲಿ ಸಂಚಾರಕ್ಕೆ ಯೋಗ್ಯವಾಗಿ ಇರುವುದಿಲ್ಲ  ,ನಮ್ಮ 30 ವರುಷಗಳ ಹಿಂದಿನ ಬೇಡಿಕೆಯಾಗಿದ್ದು ಇಲ್ಲಿಯವರಿಗೆ ಪೂರ್ಣವಾಗಿರುದಿಲ್ಲ ,   ಕಳೆದ ಸಾಲಿನಲ್ಲಿ 200 ಮೀಟರ್ ಮಾತ್ರ ಕಾಂಕ್ರೀಟ್ ಆಗಿರುತ್ತದೆ. ಈ ರಸ್ತೆಯು ಧರ್ಮಸ್ಥಳ -ಸುಬ್ರಮಣ್ಯ ರಸ್ತೆಯಿಂದ ಕೊಣಾಜೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಅತ್ಯಂತ ಸಮೀಪದ  ಸಂಪರ್ಕ ರಸ್ತೆಯಾಗಿಯೂ ಬಳಕೆಯಾಗುತ್ತಿದೆ. ರಸ್ತೆಯ ಇಕ್ಕೆಲಗಳು ಆನೆಯ ದಾಳಿಯಿಂದ ಸಮಸ್ಯೆಗೆ ಒಳಗಾದ ಪ್ರದೇಶಗಳಾಗಿದ್ದು ಎಲ್ಲ ರೀತಿಯ ತುರ್ತು ಅಗತ್ಯಗಳಿಗೆ ನಾಗರಿಕರು ಇದೆ ರಸ್ತೆಯನ್ನು ಅವಲಂಬಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top