




ಕಡಬ: ಇಲ್ಲಿನ ಮೆಸ್ಕಾಂ ಕಚೇರಿಯ ಸುಮಾರು ನೂರು ಮೀಟರ್ ಅಂತರದಲ್ಲಿ ಮಹಲೇಶ್ವರಕ್ಕೆ ಸಂಪರ್ಕವಾಗುವ ರಸ್ತೆ ಪಕ್ಕವೇ ವಿದ್ಯುತ್ ಕಂಬಗಳಲ್ಲಿ ಬಳ್ಳಿ ಸುತ್ತಿಕೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅಲ್ಲದೆ ಪ.ಪಂ ನಿರ್ವಹಣೆಯಲ್ಲಿರುವ ಪಂಪ್ ಶೆಡ್ ಕೂಡ ಬಳ್ಳಿಗಳಿಂದ ಸಂಪೂರ್ಣ ಮುಚ್ಚಿಹೋಗಿದೆ.
ಇನ್ನು ಪಂಪ್
ಗೆ ಸ್ವಿಚ್ ಹಾಕಲು ಬರುವ ವಾಟರ್ ಮ್ಯಾನ್ ಹಲವು ಸಮಯಗಳಿಂದ
ಬಳ್ಳಿಗಳ ನಡುವೆ ಇರುವ ಪಂಪ್ ಶೆಡ್ ನಲ್ಲಿ ಸ್ವಿಚ್ ಹಾಕುತ್ತಿರುವುದು ಕಂಡು ಬಂದಿದೆ .ಈ ಹಿಂದೆ ಪಂಪ್ ಶೆಡ್
ಗೆ ಹೊಂದಿಕೊಂಡಿದ್ದ ಗಿಡ ಗಂಟಿಗಳನ್ನು ತೆರವು ಮಾಡಲಾಗಿತ್ತು.ಇದೀಗ ಮತ್ತೆ ಅಷ್ಟೇ ಪ್ರಮಾಣದಲ್ಲಿ
ಬೆಳೆದಿದ್ದು ಬಳ್ಳಿಗಳ ಪೂರ್ಣ ತೆರವಿಗೆ ಇಲಾಖೆ ಮುಂದಾಗಿಲ್ಲ.
ಮೆಸ್ಕಾಂ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಂಬಗಳಲ್ಲಿ ಬಳ್ಳಿಗಳು ಸುತ್ತಿಕೊಂಡಿವೆ. ಅನಾಹುತಗಳು ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಂಡರೆ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದಾಗಿದೆ.
ವಿದ್ಯುತ್
ತಂತಿಗಳಿಗೆ ತಾಗುವ ಮರದ ಗೆಲ್ಲುಗಳನ್ನು ಮಾತ್ರ ತೆರವುಗೊಳಿಸುವ ಮೆಸ್ಕಾಂ ಇಲಾಖೆ ಬಳ್ಳಿಗಳ
ತೆರವಿಗೆ ಮುಂದಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ
ವಿದ್ಯುತ್ ಶಾಕ್ ಮತ್ತು ತಂತಿಗಳು ಕಡಿದು ಬಿದ್ದ ಕಾರಣ ಜಿಲ್ಲೆಯಲ್ಲಿ ಮೂರು ಜೀವಗಳು
ಬಲಿಯಾಗಿತ್ತು .