




ಕಡಬ:ಇಲ್ಲಿನ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮವು ಜುಲೈ 5ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಡಬ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಅಭಿನಂದನ್ ಎಂ.ಎಸ್. ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಕ್ಕಳಿಗೆ ನಾಮನಿರ್ದೇಶಿತ ಫಲಕಗಳನ್ನು ಹಸ್ತಾಂತರಿಸಿ ಮಾತನಾಡಿದ ಎಸ್.ಐ ಅವರು, ಮಕ್ಕಳು ಸಮಾಜದ ಜವಾಬ್ದಾರಿಯನ್ನು ಅರಿತು ಶಿಸ್ತು ಸಂಯಮದಿಂದ ಬಾಳಬೇಕು, ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ಶಾಲಾ ಮಂತ್ರಿಮಂಡಲ ಒಂದು ಉತ್ತಮ ವೇದಿಕೆ ಎಂದರು.
![]() |
ಎಸ್.ಐ ಅಭಿನಂದನ್ ಅವರು ದೀಪ ಬೆಳಗಿಸುತ್ತಿರುವುದು |
ಜೊತೆಗೆ ಮಕ್ಕಳ ಕಾನೂನು ಹಾಗೂ ಹಕ್ಕುಗಳ ಕುರಿತು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ, ಮಾತಾಜಿ ಶ್ವೇತ ಉಪಸ್ಥಿತರಿದ್ದರು.
ಶಾಲಾ ಸಾಂಸ್ಕೃತಿಕ ಪ್ರತಿನಿಧಿ ಕುಮಾರಿ ಜಾನ್ವಿ ವಂದಿಸಿದರು. ಮಾತಾಜಿ ಸುಮಂಗಲ ಕಾರ್ಯಕ್ರಮ ನಿರೂಪಿಸಿದರು.