




ಕಡಬ:ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಸೋಫಾದ ಮೇಲೆ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಿಂದ ವರದಿಯಾಗಿದೆ.
ಕಡಬ ತಾಲೂಕು ರಾಮಕುಂಜದ ಆರಿಂಜ ಮನೆಯ ಜನಾರ್ಧನ ಗೌಡ ಮೃತಪಟ್ಟವರು.
ಈ
ಬಗ್ಗೆ ಮೃತರ ಪತ್ನಿ ಶ್ರೀಮತಿ ಜಯಂತಿ ಠಾಣೆಗೆ ನೀಡಿದ್ದು,
ಸುಮಾರು 12 ವರ್ಷಗಳ ಹಿಂದೆ ತನಗೆ ವಿವಾಹವಾಗಿದ್ದು, ಪ್ರಸ್ತುತ ಗಂಡನನ್ನು ಬಿಟ್ಟು 1 ½ ವರ್ಷಗಳ ಹಿಂದೆ ನನ್ನ
ಮಕ್ಕಳೊಂದಿಗೆ ತನ್ನ ತಾಯಿ ಮನೆಯಾದ ಅಲಂಕಾರು ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದು ತನ್ನ ಗಂಡ ರಾಮಕುಂಜ ಗ್ರಾಮದಲ್ಲಿ ಮನೆಯಲ್ಲಿಯೇ ಒಬ್ಬನೇ ವಾಸವಿದ್ದರು.
ಎರಡು ದಿನಗಳ ಹಿಂದಿನಿಂದಲೂ ಆತನ ಅಣ್ಣನ ಹೆಂಡತಿಯು ಫೋನು ಕರೆ ಮಾಡಿದರೂ ಫೋನು ತೆಗೆದಿರುವುದಿಲ್ಲ. ಜುಲೈ17 ರಂದು ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲಿನ ಚಿಲಕವನ್ನು ಮನೆಯ ಒಳಗಡೆಯಿಂದ ಹಾಕಿಕೊಂಡಿರುವುದು ಕಂಡು ಬಂದಿದೆ.
ನಂತರ ಕಿಟಕಿಯಿಂದ ನೋಡಿದಾಗ ಗಂಡ ಮಲಗಿದ ಸ್ಥಿತಿಯಲ್ಲಿಯೇ ಇರುವುದು ಕಂಡು ಬಂದಿದ್ದು, ಬಳಿಕ ಬಾಗಿಲನ್ನು ಹೊಡೆದು ಒಳ ಹೋಗಿ ನೋಡಿದಾಗ ಮನೆಯ ಒಳಗಿನ ಸೋಫಾದ ಮೇಲೆ ಪತಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ 20/2024 ಕಲಂ:194 ಬಿ.ಎನ್.ಎಸ್.ಎಸ್ -2023ಯಂತೆ ಪ್ರಕರಣ ದಾಖಲಾಗಿರುತ್ತದೆ.