




ಕುಕ್ಕೆ ಸುಬ್ರಹ್ಮಣ್ಯ : ಜೀವನದಲ್ಲಿ ಎಷ್ಟೇ ದುಡ್ಡಿರಲಿ, ಅಸ್ತಿ ಇರಲಿ, ತುಂಬಾ ಸಂತೋಷ ಪಡೋದು
ನಾವೇನಾದರೂ ಕಳಕೊಂದದ್ದು ಸಿಕ್ಕಾಗ ಅಲ್ವೇ?
ಇಂತಹದೇ ಕ್ಷಣಕ್ಕೆ ಸಾಕ್ಷಿಯಾಗಿದ್ದು ಧರ್ಮಸ್ಥಳದಲ್ಲಿ ಕಾಣೆಯಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರು ರಕ್ಷಣೆ ಮಾಡಿ ಆತನ ಅಮ್ಮನ ಮಡಿಲು ಸೇರಿಸಿದ ಘಟನೆ.
ಹೌದು ಕುಕ್ಕೆ ಸುಬ್ರಹ್ಮಣ್ಯ ಕಾಶಿಕಟ್ಟೆ ಫುಟ್ಪಾತ್ ನಲ್ಲಿ ಜುಲೈ 23(ಮಂಗಳವಾರ) ಯುವಕನೊಬ್ಬ ಮಳೆಯಲ್ಲೇ ನೆನೆಯುತ್ತಾ ಅಸಾಯಕ ಸ್ಥಿತಿಯಲಿದ್ದ ಸತೀಶ್ ಎಂಬಾತನ್ನು ಹವ್ಯಾಸಿ ಪತ್ರಕರ್ತ ಶಿವ ಭಟ್ ಮತ್ತು ಕೊಯಂಬತ್ತೂರು ನ ಈ ಟಿವಿ ಭಾರತ್ ಪತ್ರಕರ್ತರ ನೆರವಿನಲ್ಲಿ ಆತನ ಮನೆಗೆ ಸಂಪರ್ಕ ಕಲ್ಪಿಸಿದ್ದರು.
ಬಳಿಕ ಬೆಂಗಳೂರಿನ ಆಶ್ರಮಕ್ಕೆ ಕಳುಹಿಸಿದ್ದರು.ಇದೀಗ
ಜುಲೈ 27 ರಂದು ಬೆಂಗಳೂರಿನಲ್ಲಿ ತಾಯಿ ಮಗ ಒಂದಾಗಿದ್ದಾರೆ.
ತನ್ನ ಮಗನನ್ನು ಕಂಡ ತಾಯಿ ಸರಸ್ವತಿ ಅವರು ಸಂತೋಷದಿಂದ ಅಗನನ್ನು ಅಪ್ಪಿಕೊಂಡು ಭಾವುಕರಾದರು.