




ಕಡಬ:ಎಲ್ಲೆಡೆ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ,ಇದೀಗ ಗ್ರಾಮೀಣ ಭಾಗವಾಗಿರುವ ಕಡಬದಲ್ಲೂ ಡೆಂಗ್ಯೂ ಪ್ರಕರಣಗಳು ಸುದ್ದಿಯಾಗುತ್ತಿವೆ.
ಇದೀಗ ಪಟ್ಟಣ ಪಂಚಾಯತ್ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಗಳ ನಿಯಂತ್ರಣ ಕಾರ್ಯಕ್ರಮದಡಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮುಂದಾಗಿದೆ.
ಜುಲೈ 10ರಂದು ಪ.ಪಂ
ಸಿಬ್ಬಂದಿಗಳು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ವಾರ್ಡುಗಳಲ್ಲಿ ಧ್ವನಿ ವರ್ಧಕದ ಮೂಲಕ ಸೂಚನೆ ನೀಡಿದ್ದಾರೆ
. ಅಲ್ಲದೆ ಕೆಲ ಕಾಲನಿ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ತೆರೆದ ಸ್ಥಳಗಳಲ್ಲಿ ನಿಂತ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕಿ ಮುಂಜಾಗೃತ ಕ್ರಮ
ಕೈಗೊಂಡಿದ್ದಾರೆ.
ಬಾವಿಗೆ ಬಿದ್ದ ಮರಿಯಾನೆಯನ್ನು ಕಲ್ಲು ಕೆಡವಿ ರಕ್ಷಿಸಿದ ತಾಯಿ ಆನೆ: ಈ ವೀಡಿಯೋ ನೋಡಿ
ನೀರು ಸಂಗ್ರಹಿಸಿದ ಪಾತ್ರೆಗಳನ್ನು ಭದ್ರವಾಗಿ ಮುಚ್ಚಿಡಬೇಕು, ಮನೆ ಸುತ್ತಮುತ್ತ ನೀರು ನಿಲ್ಲದಂತೆ
ಎಚ್ಚರವಹಿಸುವುದು, ಸೊಳ್ಳೆ ಪರದೆ ಉಪಯೋಗಿಸುವುದು ,ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ
ನೀರು ನಿಲ್ಲದಂತೆ ಮಾಡುವುದು, ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಸಲಹೆ ಪಡೆಯುವಂತೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ
ಮತ್ತು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.