




ಕಡಬ: ಮಳೆ ಆರಂಭವಾದರೂ ಚರಂಡಿಗಳನ್ನು ಸ್ವಚ್ಚಗೊಳಿಸದ ಕಾರಣ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕಡಬ ಪಟ್ಟಣ ಪಂಚಾಯತ್ ಚರಂಡಿ ದುರಸ್ತಿಗೆ ಮುಂದಾಗಿತ್ತು.
ಇದೀಗ
ಕಡಬ-ಪಂಜ ರಸ್ತೆಯ ಕೋಡಿಂಬಾಳ ರೈಲ್ವೆ ಸ್ಟೇಷನ್ ಗೆ ಹೋಗುವ ದಾರಿ ಪಕ್ಕ ಸ್ವಚ್ಚಗೊಳಿಸಲಾಗಿರುವ ಚರಂಡಿಗಳ ಮೇಲ್ಬಾಗದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಮರದ ಗೆಲ್ಲುಗಳನ್ನು ಕಡಿದು ಹಾಕಿದ್ದು
ಮಳೆ ನೀರು ಸರಾಗವಾಗಿ ಹರಿದು ಹೋಗಲು ತಡೆಯಾಗಿದೆ.
ಮೆಸ್ಕಾಂ
ಇಲಾಖೆಯು ವಿದ್ಯುತ್ ತಂತಿಗಳಿಗೆ ತಗಲುವ ಮರದ ಗೆಲ್ಲುಗಳನ್ನು ಕಡಿಯುತ್ತಿರುವುದು ಉತ್ತಮ ಕಾರ್ಯವಾದರೂ ಚರಂಡಿಗೆ ಹಾಕಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಕಡಿದು ಹಾಕಿದ ಮರದ ಗೆಲ್ಲುಗಳನ್ನು ಕನಿಷ್ಟ ಚರಂಡಿಯಿಂದ
ಬದಿಗೆ ಸರಿಸುವ ಕೆಲಸವನ್ನು ಮೆಸ್ಕಾಂ ಸಿಬ್ಬಂದಿಗಳು ಮಾಡಿಲ್ಲ.
ಇದೀಗ
ಗೆಲ್ಲುಗಳನ್ನು ವಿಲೇವಾರಿ ಮಾಡುವ ಕೆಲಸ ಯಾರದು ಎನ್ನುವ
ಪ್ರಶ್ನೆ ಎದ್ದಿದೆ. ಪಟ್ಟಣ ಪಂಚಾಯತ್ ಕಾರ್ಮಿಕರೇ
ಮತ್ತೆ ತೆರವುಗೊಳಿಸಬೇಕಾದಿತೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ.