ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣಾ ಛತ್ರ, ಕಾರ್‌ ಮ್ಯೂಸಿಯಂಗೆ ಇನ್ನು ಸೌರಶಕ್ತಿ ಬಳಕೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣಾ ಛತ್ರ, ಕಾರ್‌ ಮ್ಯೂಸಿಯಂಗೆ ಇನ್ನು ಸೌರಶಕ್ತಿ ಬಳಕೆ

Kadaba Times News

ಕಡಬ ಟೈಮ್ಸ್ ವಿಶೇಷ:  ಧರ್ಮಸ್ಥಳದ ಅನ್ನಪೂರ್ಣಾ ಛತ್ರದಲ್ಲಿ ನಿತ್ಯವೂ ಸಾವಿರಾರು ಮಂದಿ ಭಕ್ತರಿಗೆ ಅನ್ನದಾನ ನಡೆಯುತ್ತದೆ. ಇದೀಗ  ಸೆಲ್ಕೊ ಪ್ರತಿಷ್ಠಾನ ಸೌರ ವಿದ್ಯುತ್ಸ್ಥಾವರ ಕೊಡಮಾಡಿದ್ದು ಅನ್ನದಾನಕ್ಕೆ ಮತ್ತಷ್ಟು ಅನುಕೂಲವಾಗಲಿದೆ.


ಅನ್ನಪೂರ್ಣಾ ಛತ್ರಕ್ಕೆ 32 ಕೆ.ವಿ. ಸಾಮರ್ಥ್ಯದ ಘಟಕ ಹಾಗೂ ಕಾರ್ಮ್ಯೂಸಿಯಂಗೆ 5 ಕಿಲೋವಾಟ್ಸಾಮರ್ಥ್ಯದ ಘಟಕ ಸಹಿತ ಒಟ್ಟು 37 ಕಿಲೋವಾಟ್ಸಾಮರ್ಥ್ಯದ ಎರಡು ಘಟಕಗಳನ್ನು ಅಳವಡಿಸಿ ಸೌರಶಕ್ತಿ ಬಳಕೆಯೊಂದಿಗೆ ವಿದ್ಯುತ್ದೀಪ ಮತ್ತು ಫ್ಯಾನ್ಗಳಿಗೆ ವಿದ್ಯುತ್ಪೂರೈಕೆ ಮಾಡಲಾಗಿದೆ.



ಧರ್ಮಸ್ಥಳದಲ್ಲಿ ಸೋಮವಾರ ಅನ್ನಪೂರ್ಣಾ ಛತ್ರ ಹಾಗೂ ಕಾರ್ಮ್ಯೂಸಿಂಗೆ ಸೆಲ್ಕೊ ಪ್ರತಿಷ್ಠಾನ ಕೊಡಮಾಡಿದ 37 ಕೆವಿ ಸೌರಶಕ್ತಿ ಬಳಕೆಗೆ  ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿ ಶುಭ ಹಾರೈಸಿದರು . ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 30 ವರ್ಷಗಳಿಂದಲೇ ಸೌರಶಕ್ತಿ ಬಳಕೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅರಿವು, ಜಾಗೃತಿ ಮೂಡಿಸಲಾಗಿದೆ. 3 ಲಕ್ಷ ಸೌರಶಕ್ತಿ ಯುನಿಟ್ಒದಗಿಸಲಾಗಿದೆ.

 


ಲಂಡನ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಶೆನ್ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸ್ಮರಿಸಿಕೊಂಡರು. ಅಲ್ಲದೆ  ಸದ್ಯದಲ್ಲೇ ಧರ್ಮಸ್ಥಳದಿಂದ ಕೆಲವು ಹಿರಿಯ ನೌಕರರು ಶಿರಡಿಗೆ ತೆರಳಿ ಸೌರಶಕ್ತಿಯ ಸ್ಟೀಮ್ಮೂಲಕ ಅನ್ನ ಬೇಯುವ ವಿಧಾನವನ್ನು ಅಧ್ಯಯನ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುವರು. ಮುಂದೆ ಇಲ್ಲಿನ ಎಲ್ಲ ವಸತಿಛತ್ರಗಳು ಹಾಗೂ ಕಚೇರಿಗಳಲ್ಲಿಯೂ ಸೌರಶಕ್ತಿಯ ಸದುಪಯೋಗ ಮಾಡಲಾಗುವುದು ಎಂದಿದ್ದಾರೆ.


ಕಾರ್ಯಕ್ರಮದಲ್ಲಿ ಸೆಲ್ಕೊ ಪ್ರತಿಷ್ಠಾನದ ಸಿ... ಭಾಸ್ಕರ ಮೋಹನ ಹೆಗಡೆ,. ಹೇಮಾವತಿ ವೀ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top