




ಕಡಬ: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.
ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಿಂದ ಒಟ್ಟು ಆರು ಪೊಲೀಸರ ಕೌನ್ಸಿಲಿಂಗ್ ಎಸ್ಪಿ ಕಚೇರಿಯಲ್ಲಿ ನಡೆದಿದ್ದು ಜಿಲ್ಲೆಯ ವಿವಿಧ ಠಾಣೆಗಳಿಗೆ ವರ್ಗಾವಣೆಯಾಗಿದೆ.
ಕಡಬ ಠಾಣೆಯ ಎ.ಎಸ್.ಐ ಸುರೇಶ್ ಅವರು ಸುಳ್ಯ ಠಾಣೆಗೆ , ಹೆಡ್ ಕಾನ್ಸ್ಟೇಬಲ್ ಭವಿತ್ ಅವರು ಬೆಳ್ಳಾರೆ ಠಾಣೆಗೆ , ಕಾನ್ಸ್ಟೇಬಲ್ ಗಳಾದ ಚಂದನ್ಮತ್ತು ಶ್ರೀ ಶೈಲಾ ಹಾಗೂ ಚಂದ್ರಿಕಾ ಅವರು ಸುಬ್ರಹ್ಮಣ್ಯ ಠಾಣೆಗೆ, ಭಾಗ್ಯಮ್ಮ ಅವರು ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಸಾರ್ವಜನಿಕರ ಜೊತೆ ಉತ್ತಮ ನಡವಳಿಕೆ ಹೊಂದಿದ್ದ ಪೊಲೀಸರಿಗೆ ಜನರು ಶುಭಾಶಯ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ ಪಿ ಕಚೇರಿಯಲ್ಲಿ ಎಲ್ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗಿತ್ತು.