ಪಂಜದ ಸರ್ಕಾರಿ ಕಾಲೇಜಿನಲ್ಲಿ ಎರಡು ದಿನ ಕಳ್ಳತನ: 9 ವಿದ್ಯುತ್ ಫ್ಯೂಸ್, ಇಂಟರ್ನೆಟ್ ಕೆಬಲ್ ಹೊತ್ತೊಯ್ದ ಕಳ್ಳರ ಗ್ಯಾಂಗ್

ಪಂಜದ ಸರ್ಕಾರಿ ಕಾಲೇಜಿನಲ್ಲಿ ಎರಡು ದಿನ ಕಳ್ಳತನ: 9 ವಿದ್ಯುತ್ ಫ್ಯೂಸ್, ಇಂಟರ್ನೆಟ್ ಕೆಬಲ್ ಹೊತ್ತೊಯ್ದ ಕಳ್ಳರ ಗ್ಯಾಂಗ್

Kadaba Times News

ಪಂಜದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಅಪರಿಚಿತರು ಸೊತ್ತುಗಳನ್ನು ಹಾನಿಗೈದು ಎರಡು ದಿನ ಪ್ರತ್ಯೇಕವಾಗಿ  ಕಳ್ಳತನ  ಮಾಡಿರುವ ಘಟನೆ ವರದಿಯಾಗಿದೆ.


ಜು.4 ರಂದು ರಾತ್ರಿ  ಕಾಲೇಜಿನಲ್ಲಿ ಕಳ್ಳತನ, ಕಿಟಕಿ ಗಾಜು ಒಡೆದ ಪ್ರಕರಣ ನಡೆದಿತ್ತುಜು.5 ರಂದು ರಾತ್ರಿ ಮತ್ತೆ ಕಳ್ಳರು ಕಾಲೇಜು ಕೊಠಾಡಿ ಬಾಗಿಲಿನ ಹಲಗೆ ಮುರಿದಿರುವುದು ,ಹೊಸದಾಗಿ ಹಾಕಿದ ಫ್ಯೂಸ್ ಕದ್ದಿರುವುದು ಬೆಳಕಿಗೆ ಬಂದಿದೆ.



ಪಿ.ಯು.ಕಾಲೇಜಿನಲ್ಲಿ ಕಿಟಕಿ ಗಾಜು ಒಡೆದಿದ್ದು ಮತ್ತು ಅಲ್ಲೇ ಸಮೀಪದಲ್ಲಿರುವ ಹೈಸ್ಕೂಲ್ ಕಟ್ಟದಲ್ಲಿರುವ ಸುಮಾರು 9 ವಿದ್ಯುತ್ ಫ್ಯೂಸ್, ಇಂಟರ್ನೆಟ್ ಕೆಬಲ್ ಕಳ್ಳತನ ವಾಗಿದೆ.


ಕಾಲೇಜು ಜಗುಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು ಪೊಲೀಸರ ಪರಿಶೀಲನೆಯ ಬಳಿಕ ಸಮರ್ಪಕ ಮಾಹಿತಿ ಸಿಗಲಿದೆ . ಕುರಿತು ಸುಬ್ರಹ್ಮಣ್ಯ ಪೋಲೀಸರಿಗೆ ತಿಳಿಸಲಾಗಿತ್ತು.  ಜು.4 ರಂದು ರಾತ್ರಿ ಪಂಜ ಸಮೀಪ ಪುತ್ಯ ಬಸ್ ತಂಗುದಾಣದಲ್ಲಿ ಅಳವಡಿಸಿರುವ ಮೂರು ಸ್ಟೀಲ್ ಪೈಪ್ ಗಳನ್ನು ಒಡೆದು ತೆಗೆದ ರೀತಿಯಲ್ಲಿ ಪತ್ತೆಯಾಗಿದೆ. ನಿರಂತರ ಕಳ್ಳತನದಿಂದ ಪಂಜದಲ್ಲಿ ಜನರಲ್ಲಿ ಭಯಹುಟ್ಟಿಸಿದೆ. ಮೊದಲ ದಿನ ನಡೆದ ಕಳ್ಳತನದ ಬಗ್ಗೆ   ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದರೂ ಪೋಲೀಸರು ಬಾರದಿರುವುದೇ  ಮರು ದಿನವೂ ಕಳ್ಳರು ರಾಜರೋಷವಾಗಿ ಕಳ್ಳತನ ಮಾಡಲು ಕಾರಣ ವಾಗಿದೆ ಎಂದು ಹೇಳಲಾಗಿದೆ. 

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top