


ಸುಳ್ಯ: ವ್ಯಕ್ತಿಯೊಬ್ಬ ಚೂರಿಯಿಂದ ಪತ್ನಿಗೆ ಹಲ್ಲೆ ನಡೆಸಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಲ್ಸೂರು ಗ್ರಾಮದ 25 ವರ್ಷದ ಮಹಿಳೆಯನ್ನು 6 ವರ್ಷ ಗಳ ಹಿಂದೆ ನವೀನ್ ಕುಮಾರ್ಗೆ ವಿವಾಹ ಮಾಡಿ ಕೊಡಲಾಗಿದ್ದು, ಆ ಬಳಿಕ ಪತ್ನಿಗೆ ಪತಿಯು ಕಾರಣ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಪತ್ನಿಯು ವಿನೋಭನಗರದಲ್ಲಿರುವ ತವರು ಮನೆಯಲ್ಲಿ ವಾಸವಿದ್ದಾರೆ. ಜೂ.28ರಂದು ರಾತ್ರಿ ಅಲ್ಲಿಗೆ ಹೋಗಿದ್ದ ನವೀನ್ ಕುಮಾರ್ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದು, ಮಹಿಳೆಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.