


ಕಡಬ ಟೈಮ್ಸ್ ಕಾಳಜಿ, ಸುಬ್ರಹ್ಮಣ್ಯ: ಶಾಲೆ ಬಿಟ್ಟು ಬಾಲಕನೋರ್ವ ತನ್ನ ಸೈಕಲ್ ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಕುಮಾರಧಾರ ಬಳಿ ಚರಂಡಿಗೆ ಬಿದ್ದು ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ನಡೆದಾಡಲಾಗದ ಪರಿಸ್ಥಿತಿಯಲ್ಲಿ ಇರುವ ಈತನ ಹೆಸರು ಸಾಯಿ ದರ್ಶನ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಕಳೆದ ಮೂರು ವರ್ಷಗಳಿಂದ ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೋವಿನ ನಡೆಯೂ ಹೆತ್ತವರ ನೆರವಿನೊಂದಿಗೆ ಪಿಯುಸಿ ತೇರ್ಗಡೆ ಹೊಂದಿ ಮಲಗಿದಲ್ಲೇ ಕನಸು ಕಾಣುತ್ತಿರುವ ಈತನಿಗೆ ಮತ್ತೆ ಚಿಕಿತ್ಸೆಯ ಅಗತ್ಯವಿದೆ.ಹೀಗಾಗಿ ಇದೇ ಜುಲೈ 2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.ಹೀಗಾಗಿ ದಾನಿಗಳ ಆರ್ಥಿಕ ನೆರವು ಅಗತ್ಯವಾಗಿದೆ.
ಮೂಲತ: ಬೆಳಗಾಂ ಜಿಲ್ಲೆಯಿಂದ ಬಂದಿರುವ ಶ್ರೀಕಾಂತ ಕುಲಕರ್ಣಿ ಪತ್ನಿ ಮತ್ತು ಮಗನ ಜೊತೆ ಸುಬ್ರಹ್ಮಣ್ಯದಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಕ್ರಿಯಾ ಕರ್ತೃ ಆಗಿ ದುಡಿಯುತ್ತಿರುವ ಈ ಬಡ ಕುಟುಂಬ
ಮಗನ ಚಿಕಿತ್ಸಾ ವೆಚ್ಚಕ್ಕಾಗಿ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಸಹಾಯ ಮಾಡಲು ಇಚ್ಚಿಸುವವರು ಕೆಳಗಿನ ಬ್ಯಾಂಕ್ ಖಾತೆಗೆ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ.
Name: Bhuvaneshwari s kulkarni,
Account number: no:40531891823,
IFSC Code: SBIN0040951,
Branch :subramanya,
Bank:State bank of India
Mobile Number : 8105129632.
Phone pe number:8105129632.