


ಕಡಬ: ಪೋಲೀಸ್ ಇಲಾಖೆಯ ಸರ್ವೇಕ್ಷಣೆ ಪ್ರಕಾರ ಅಪರಾಧಗಳನ್ನು ಮಾಡುವ ಅತೀ ಹೆಚ್ಚು ಪ್ರಕರಣಗಳು ಮಾದಕ ವಸ್ತುಗಳನ್ನು ಸೇವಿಸಿದ ವ್ಶಕ್ತಿಯಿಂದಲೇ ನಡೆಯುತ್ತಿರುವುದು ಕಂಡುಬರುತ್ತಿದೆ.ಕಾನೂನು ಉಲ್ಲಂಘನೆಯ ಚಟುವಟಿಕೆಗಳನ್ನು ಮಾಡಲೂ ಇದು ಪ್ರೇರಣೆ ನೀಡುತ್ತದೆ , ಹೀಗಾಗಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವುದು ಪ್ರತಿಯೊಬ ಪ್ರಜ್ಞಾವಂತ ನಾಗರಿಕರ ಕರ್ತವ್ಶವಾಗಿದೆ ಎಂದು ಕಡಬ ಠಾಣಾ ಹೆಡ್ ಕಾನ್ಸ್ಟೇಬಲ್ ಹರಿಶ್ ಅಭಿಪ್ರಾಯ ಪಟ್ಟರು.
ಅವರು ಜೂ.30 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ರಾಮನಗರ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಓಂತ್ರಡ್ಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡ ವಿಶ್ವ ಮಾಧಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ದೇಹದಲ್ಲಿ ಮದ್ಯಪಾನ ಗಾಂಜಾ, ಅಫೀಮ್ ಗಳು ಅಮಲು ನೀಡುವ ಮಾತ್ರೆಗಳು, ಸಿರಪ್ ಗಳು ಪ್ರವೇಶಿಸಿ ಮನುಷ್ಶನ ದೇಹದ ಹತೋಟಿಯನ್ನು ತಪ್ಪಿಸುವುದರ ಜೊತೆಗೆ ಸಮಾಜಘಾತುಕ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸುತ್ತದೆ.ಹೀಗಾಗಿ ಮಾದಕ ವಸ್ತುಗಳಿಂದ ನಾವು ದೂರವಿರಬೇಕು ಎಂದರಲ್ಲದೆ ಸಂಚಾರಿ ನಿಯಮ ಪಾಲನೆ, ಪೋಕ್ಸ್ ಕಾಯಿದೆಯನ್ವಯ ಅಪರಾಧಿಗಳಿಗೆ ಶಿಕ್ಷೆವಿಧಿಸುವ ವಿಧಾನಗಳು, ಮಹಿಳಾ ಸಂರಕ್ಷಣಾ ಕಾನೂನಿನ ಕುರಿತು ಸ್ವ ವಿವರವಾಗಿ ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಿವಪ್ರಸಾದ್ ರೈ ಮೈಲೇರಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಾಮನಗರ ಒಕ್ಕೂಟದ ಅಧ್ಶಕ್ಷೆ ರಝೀಯಾ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ
ಶಾಲಾಭಿವದ್ದಿ ಸಮಿತಿ ಸದಸ್ಯೆ ಭವ್ಶ, ಪೋಲೀಸ್ ಸಿಬ್ಬಂದಿ ಸರಸ್ವತಿ, ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ,ಸೇವಾಪ್ರತಿನಿಧಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಒಕ್ಕೂಟದ ಪಧಾದಿಕಾರಿಗಳು, ಸಂಘದ ಸದಸ್ಯರು ಪಾಲ್ಗೊಂಡಿದ್ದರು.