ಸುಬ್ರಹ್ಮಣ್ಯದ ಏನೆಕಲ್ಲಿನ ಹೊಳೆಗೆ ಬಿದ್ದು ಇಬ್ಬರು ಸಾವು

ಸುಬ್ರಹ್ಮಣ್ಯದ ಏನೆಕಲ್ಲಿನ ಹೊಳೆಗೆ ಬಿದ್ದು ಇಬ್ಬರು ಸಾವು

Kadaba Times News

ನಮ್ಮ ಇಂಡಿಯಾ:: ಸುಬ್ರಹ್ಮಣ್ಯದ  ಯೇನೆಕಲ್ಲಿನ ಮುಖ್ಯ ರಸ್ತೆಯ ಸೇತುವೆಯ ಕೆಳಭಾಗದ  ಹೊಳೆ ನೀರಲ್ಲಿ ಮುಳುಗಲ್ಪಟ್ಟು ಇಬ್ಬರು  ಪ್ರಾಣ ಕಳೆದುಕೊಂಡ ದಾರುಣ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಮೃತರನ್ನು ಧರ್ಮಪಾಲ ಪರಮಲೆ (46.) ಮತ್ತು ಬೆಳ್ಯಪ್ಪ ಚಳ್ಳಂಗಾರು, ಚೊಕ್ಕಾಡಿ (49.) ಎಂದು ಗುರುತಿಸಲಾಗಿದೆ.


ಧರ್ಮಪಾಲರು ಕೆಲವು ಸಮಯಗಳಿಂದ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಕಸವಿಲೇವಾರಿ ಘಟಕದಲ್ಲಿ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಳೆಯಲ್ಲಿದ್ದ ಪಂಪಿನ ಫೂಟ್ ವಾಲ್ ತೆಗೆಯಲು ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿಮುಳುಗಿರಬಹುದೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

 ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ಇನ್ನಷ್ಟೇ ಶವ ಪರೀಕ್ಷೆ ನಡೆಯಬೇಕಾಗಿದೆ ಎಂದು ತಿಳಿದುಬಂದಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top