




ಕಡಬ/ಮರ್ದಾಳ: ಎರಡು ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಕಾರೊಂದು ಮರ್ಧಾಳ ಕಂಡುಬಂದಿದ್ದು ಮಾಹಿತಿ ತಿಳಿದ ಪೊಲೀಸರು ಕಾರನ್ನು ಲಾಕ್ ಮಾಡಿದ್ದಾರೆ.
ಓಮಿನಿ ಕಾರು ಇದಾಗಿದ್ದು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರು ಮರ್ಧಾಳ ಜಂಕ್ಷನ್ ನಲ್ಲಿ ಕಾರಿನ ಚಕ್ರಗಳಿಗೆ ಲಾಕ್ ಮಾಡಿದ್ದಾರೆ.
ಸದ್ಯ ಪೊಲೀಸರು ಕಾರಿನ ಮಾಲಕರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿರುವುದಾಗಿ
ತಿಳಿದು ಬಂದಿದೆ.