ಆಲಂಕಾರು: ನಾಳೆ ಕುಂಡಾಜೆ ಶಾಲೆಯಲ್ಲಿ ಮೊಗೇರ ಸಂಘದ ವತಿಯಿಂದ ಆಟಿದ ಗಮ್ಮತ್ತ್ ಕಾರ್ಯಕ್ರಮ

ಆಲಂಕಾರು: ನಾಳೆ ಕುಂಡಾಜೆ ಶಾಲೆಯಲ್ಲಿ ಮೊಗೇರ ಸಂಘದ ವತಿಯಿಂದ ಆಟಿದ ಗಮ್ಮತ್ತ್ ಕಾರ್ಯಕ್ರಮ

Kadaba Times News

ಕಡಬ ಟೈಮ್ಸ್(KADABA TIMES):ಮೊಗೇರ ಸಂಘ ಆಲಂಕಾರು ಮಂಡಲ ಮತ್ತು ತನ್ನಿಮಾನಿಗ ಮೊಗೇರ ಮಹಿಳಾ ಸಂಘದ ವತಿಯಿಂದ ಆಗಸ್ಟ್ 7 ರಂದು   ಆಟಿದ ಗಮ್ಮತ್ತ್ ವಿಶೇಷ ಕಾರ್ಯಕ್ರಮವು  ಸ.ಕಿ.ಪ್ರಾ.ಶಾಲೆ ಕುಂಡಾಜೆಯಲ್ಲಿ ನಡೆಯಲಿದೆ.

ಆಲಂಕಾರು ಮೊಗೇರ ಸಂಘದ ಅಧ್ಯಕ್ಷ  ಬಾಲಕೃಷ್ಣ ಕೇಪುಳು ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು  ಬಾಬು ಮರುವಂತಿಲ ಉದ್ಘಾಟಿಸಲಿದ್ದಾರೆ.

ಆಟಿಯ ವಿಶೇಷತೆ ಬಗ್ಗೆ  ಶಿಕ್ಷಕಿ ಕುಮಾರಿ ಚಿತ್ರಾಕ್ಷಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಪತ್ರಕರ್ತ ವಿ.ಕೆ ಕಡಬ,  ಮೊಗೇರ ಮಹಿಳಾ ಸಂಘದ ಅಧ್ಯಕ್ಷೆ  ಅಕ್ಷತಾ ಕುಕ್ಕೆಜಾಲ್ ,  ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ  ಶ್ರೀಮತಿ ಜಯಂತಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ  ಆಟಿಯ ವಿಶೇಷ ತಿಂಡಿ ತಿನಸುಗಳ ಸ್ಪರ್ಧೆ ನಡೆಯಲಿದ್ದು , ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. ಸ್ವಜಾತಿ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top