ಕಡಬ: ಸುಬ್ರಹ್ಮಣ್ಯದಲ್ಲಿ ಮಣ್ಣಿನಡಿ ಸಿಲುಕಿ ಮೃತ ಪಟ್ಟ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಭೇಟಿ

ಕಡಬ: ಸುಬ್ರಹ್ಮಣ್ಯದಲ್ಲಿ ಮಣ್ಣಿನಡಿ ಸಿಲುಕಿ ಮೃತ ಪಟ್ಟ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಭೇಟಿ

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯದಲ್ಲಿ ಗುಡ್ಡ ಜರಿದು ಮಣ್ಣಿನಡಿ ಸಿಲುಕಿ  ಮೃತಪಟ್ಟ ಮಕ್ಕಳ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ರವರು ಭೇಟಿ ನೀಡಿದರು.

ಈ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡಿದ  ಅವರು  ಮನೆಗಾಗಿ ಈಗಾಗಲೇ 95 ಸಾವಿರ ನೀಡಿದ್ದೇವೆ. ಇನ್ನು ಮನೆ ಕಟ್ಟುವುದಿದ್ದಲ್ಲಿ ಮತ್ತೆ  4 ಲಕ್ಷ ಕೊಡಲಾಗುವುದು, ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಯಾಗಿದ್ದರೆ  ಹಣ ಕೊಡುವ ಪ್ರಾವಿಶನ್ ಇಲ್ಲ, ಆದರೂ  ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಣೆ ನೀಡಿ ಅಂಗಡಿಗಳಿಗೂ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದರು.

ಸ್ಥಳದಲ್ಲಿ  ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌, ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಜಗದೀಶ್ ಶೇಣವ, ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಕಡಬ ತಹಶಿಲ್ದಾರ್ ಅನಂತ ಶಂಕರ, ಪುತ್ತೂರು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಎ ಸಿ ಎಫ್ ಪ್ರವೀಣ್ ಶೆಟ್ಟಿ, ಉಪವಲಯಾರಣ್ಯಧಿಕಾರಿ ಮಂಜುನಾಥ, ಕೊರಗಪ್ಪ ಹೆಗಡೆ,ಆರ್ ಐ ಅವಿನ್ ರಂಗತ್ ಮಲೆ, ಪಂಜ ಸೊಸೈಟಿ  ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಸುಬ್ರಹ್ಮಣ್ಯ ಮೆಸ್ಕಾಂ ಸಹಾಯಕ ಅಭಿಯಂತರ ಚಿದಾನಂದ, ಪಂಜ ಮೆಸ್ಕಾಂ ಹರಿವೆಂಕಟೇಶ ಶರ್ಮ, ಪಂಜ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಸದಸ್ಯರಾದ ನಾರಾಯಣ ಕೃಷ್ಣನಗರ, ಚಂದ್ರಶೇಖರ ಪೆರಾಜೆ, ಲಿಖಿತ್ ಪಲ್ಲೋಡಿ, ಜಗದೀಶ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top