




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಕಡಬ:ಮಳೆಯ ಆರ್ಭಟಕ್ಕೆ ಪ್ರವಾಹದ ನೀರಿಗೆ ಬಿದ್ದ ಯುವಕ ಶರೀಫ್ ನನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿದ ಘಟನೆ ಸುಬ್ರಹ್ಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ.
ಪ್ರವಾಹದ ನೀರಿನಲ್ಲಿ ಬಂದು ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ತೆರವುಗೊಳಿಸುತ್ತಿದ್ದ ಈ ಸಂದರ್ಭದಲ್ಲಿ ಕ್ರೇನ್ ಆಪರೇಟರ್ ಶರೀಫ್ ನಿಯಂತ್ರಣ ತಪ್ಪಿ ಪ್ರವಾಹದ ನೀರಿಗೆ ಬಿದ್ದಿದ್ದಾರೆ. ತಕ್ಷಣವೇ ಸೋಮಶೇಖರ್ ಕಟ್ಟೆಮನೆ ಎಂಬುವವರು ಇದನ್ನು ಗಮನಿಸಿ ನದಿಗೆ ಹಾರಿ ಶರೀಫ್ ಅವರನ್ನು ರಕ್ಷಿಸಿದ್ದಾರೆ.

ಅಶಾಂತಿಯ ವಾತಾವರಣ ಹಾಗೂ ಪರಸ್ಪರ ಕೋಮುವಾದ ಕಾರಣವಾಗುತ್ತಿರುವ ಕೆಲವೊಂದು ಘಟನೆಗಳ ನಡುವೆ ಈ ಘಟನೆ ಸೌಹಾರ್ದತೆಗೆ ಸಾಕ್ಷಿಯಾಗಿದೆ.