




ಪ್ರಕರಣವೊಂದರ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ ಕಡಬ ತಾಲೂಕು ಕುಂತೂರಿನ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಂತೂರಿನ ರಾಜಿಕ್ ಬಂಧಿತ ಆರೋಪಿ. ಈತನ ವಿರುದ್ದ 2012 ರಲ್ಲಿ ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿತ್ತಾದರೂ, ಆರೋಪಿ ರಾಜಿಕ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ.
ಈ ಕಾರಣದಿಂದ ಪುತ್ತೂರಿನ ಸೆಷನ್ ಕೋರ್ಟ್ ಈತನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಇದೀಗ ಕುಂತೂರಿನ ಆರೋಪಿಯನ್ನು ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಚರಣೆಯಲ್ಲಿ ಕಡಬ ಎಸ್.ಐ ಆಂಜನೇಯ ರೆಡ್ಡಿ ಹೆಡ್ ಕಾನ್ಸ್ಟೇಬಲ್ ಗಳಾದ ಭವಿತ್ ರೈ ಹಾಗೂ ಹರೀಶ್, ಕಾನ್ಸ್ಟೇಬಲ್ ಗಳಾದ ಮಹೇಶ್ ಹಾಗೂ ಸಿರಾಜುದ್ದೀನ್ ಭಾಗವಹಿಸಿದ್ದರು.