ಟೆರೇಸ್ ನ ಅಡ್ಡಗೋಡೆ ಏರಿ ಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸುಳ್ಯ ಮೂಲದ ಯುವಕ ಸಾವು

ಟೆರೇಸ್ ನ ಅಡ್ಡಗೋಡೆ ಏರಿ ಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸುಳ್ಯ ಮೂಲದ ಯುವಕ ಸಾವು

Kadaba Times News

ಕಡಬ ಟೈಮ್ಸ್(KADABA TIMES):ಕಟ್ಟಡದ ಎರಡನೇ ಮಹಡಿಯ ಟೆರೇಸ್ ನಲ್ಲಿ ರಾಷ್ಟ್ರಧ್ವಜ  ಹಾರಿಸುವ ವೇಳೆ ಜಾರಿ ಬಿದ್ದು ಸುಳ್ಯ ಮೂಲದ  ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು  ಬೆಂಗಳೂರಿನಲ್ಲಿ  ಮೃತಪಟ್ಟ ಘಟನೆ ರವಿವಾರ ನಡೆದಿದೆ.

ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತಪಟ್ಟ ಟೆಕ್ಕಿ.

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು  ಹೆಣ್ಣೂರು  ಬಳಿ ತಮ್ಮ ಕಟ್ಟಡದ ಟೆರೇಸ್ ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು. ರವಿವಾರ ಮಧ್ಯಾಹ್ನ 1.45ರ ಸುಮಾರಿಗೆ ವಿಶ್ವಾಸ್ ಟೆರೇಸ್ ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ತೆರಳಿದ್ದರು.

ಈ ವೇಳೆ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದರು ಎನ್ನಲಾಗಿದೆ. ತಲೆಗೆ ಆಗಿದ್ದ ಗಂಭೀರ ಗಾಯದಿಂದಾಗಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ timesofindia.com ವರದಿ ಮಾಡಿದೆ

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top