




ನಮ್ಮ ಇಂಡಿಯಾ ಕನ್ನಡ:ಕ್ವಾಲೀಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರ ಮೇಲೆ ಹತ್ತಿಸಲು ಯತ್ನಿಸಿ,ಕೊನೆಗೆ ಸ್ಥಳೀಯರ ಸಹಕಾರದಿಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿಯಲ್ಲಿ
ನಿನ್ನೆ ರಾತ್ರಿ ನಡೆದಿದೆ.
ನರಸಿಂಹ ಗಡ ಎಂಬಲ್ಲಿ ಕ್ವಾಲಿಸ್ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ವಾಹನವನ್ನು ನಿಲ್ಲಿಸುವಂತೆ ರಾತ್ರಿ 11.30ಕ್ಕೆ ಸೂಚನೆ ನೀಡಿದಾಗ ವಾಹನದಲ್ಲಿದ್ದ ವ್ಯಕ್ತಿ ಪೊಲೀಸರ ಮೇಲೆಯೇ ಹತ್ತಿಸಲು ಯತ್ನಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.
ತಕ್ಷಣ ಚಾಲಕ ಪರಾರಿಯಾಗಿದ್ದು, 3 ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದನಗಳನ್ನು ಗುರುವಾಯನಕೆರೆ ಬಳಿಯ ಪಿಲಿಚಂಡಿ ಕಲ್ಲು ಎಂಬಲ್ಲಿಯ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.